ಜಾಗತಿಕ ಲಿಂಗಾಯತ ಮಹಾ ಸಭೆಯಿಂದ ಪ್ರತಿಭಟನೆ

  • In State
  • June 6, 2022
  • 254 Views
ಜಾಗತಿಕ ಲಿಂಗಾಯತ ಮಹಾ ಸಭೆಯಿಂದ ಪ್ರತಿಭಟನೆ

ರಾಯಬಾಗ: ಬಸವಣ್ಣನವರನ್ನು ಕುರಿತ ೯ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಬಸವಣ್ಣನವರ ಕುರಿತು ಪ್ರಕಟಿಸಿರುವ ಕೆಲವು ಆ ನೈತಿಹಾಸಿಕ ವಿಷಯಗಳು ಸೇರ್ಪಡಿಸಿರುವುದು ತೆಗೆದುಹಾಕಬೇಕೆಂದು ತಾಲೂಕಾ ಜಾಗತಿಕ ಲಿಂಗಾಯತ ಮಹಾಸಭಾ ಘಟಕ ಹಾಗೂ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಪಟ್ಟಣದ ಅಭಾಜಿ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು.

1.ಉಪನಯನವಾದ ನಂತರ ಕೂಡಲಸಂಗಮಕ್ಕೆ ನಡೆದುಬಂದರು ಎಂದು ಬರೆಯಲಾಗಿದೆ ಇದು ತಪ್ಪು

2.ಶೈವ ಗುರುಗಳ ಸಾನಿಧ್ಯದಲ್ಲಿ ಲಿಂಗ ದೀಕ್ಷೆಯನ್ನು ಪಡೆದರು ಎಂಬುದು ಶುದ್ದ ಸುಳ್ಳು.

3. ಬಸವಣ್ಣನವರು ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು ಎಂದು ಈಗ ಪಟ್ಟದಲ್ಲಿ ಸೇರಿಸಲಾಗಿದೆ ಇದು ತಪ್ಪು.

4. ಹೀಗೆ ಮಾನವೀಯ ಮೌಲ್ಯಗಳಿಂದ ಕುಡಿದ ಲಿಂಗಾಯತ ಧರ್ಮಕ್ಕೆ ಅವಮಾನ ಪಡಿಸಲಾಗಿದೆ ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಶೀಘ್ರದಲ್ಲಿ ಇಂತಹ ವಿಷಯಗಳನ್ನು ತೆಗೆದುಹಾಕಬೇಕೆಂದು ಉಪತಹಸೀಲ್ದಾರ ಪಿ ಎಂ ಕಲ್ಲೋಳಿ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ  ಪರಮಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ವಿರಕ್ತಮಠ ಹಂದಿಗುAದ, ಪರಮಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ವಿರಕ್ತಮಠ  ಬೆಂಡವಾಡ, ಬಿ ಆರ್ ಅಜುರೆ  ತಾಲೂಕ ಘಟಕದ ಅಧ್ಯಕ್ಷರು, ಅಪ್ಪಾಸಾಹೇಬ ಕುಲಗುಡೆ, ಎಲ್ ಬಿ ಚೌಗಲಾ ವಕೀಲರು, ವಸಂತ ಹೊಸಮನಿ, ಜ್ಯೋತಿ ಕೆಂಪಟ್ಟಿ, ಅಶೋಕ ಅಂಗಡಿ, ಗಿರೀಶ ಪಾಟೀಲ, ಸಂಜಯ್ ಕುಸ್ತಿಗಾರ, ವಿದ್ಯಾಧರ್ ಕುಲಗುಡೆ, ಅಣ್ಣಾಸಾಹೇಬ ಕುಲಗುಡೆ, ಸಂತೋಷ್ ಮೇತ್ರಿ, ಜಯಾನಂದ ಹಿರೇಮಠ, ನಾರಾಯಣ ಮೇತ್ರಿ ಮುಂತಾದವರು ಉಪಸ್ಥಿತರಿದ್ದರು.

Related