ಬೆಣ್ಣೆಯಲ್ಲಿರುವ ಗುಣಲಕ್ಷಣಗಳು

ಬೆಣ್ಣೆಯಲ್ಲಿರುವ ಗುಣಲಕ್ಷಣಗಳು

ಬೆಣ್ಣೆ ಎಂದರೆ ಸಾಕು ಮನೆಯಲ್ಲಿರುವ ಎಲ್ಲರಿಗೂ ಅದು ಬಹು ಪ್ರಿಯ ಅದನ್ನು ನಾವು ಪ್ರತಿದಿನ ನಮ್ಮ ಆಹಾರದಲ್ಲಿ ಬಳಸುವುದರಿಂದ ನಮ್ಮ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ.

ಬೆಣ್ಣೆಯಲ್ಲಿ ಸಮೃದ್ಧವಾದ ಪ್ರೋಟೀನ್ ಸ್ಯಾಚುರೇಟೆಡ್ ಕೊಬ್ಬುಗಳನ್ನು, ವಿಟಮಿನ್ ಡಿ ಮತ್ತು ಎ ಇಂದ ಕೂಡಿರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಮೂಳೆಯ ಆರೋಗ್ಯವನ್ನು ಕಾಪಾಡುವುದು. ಅದ್ಭುತವಾದ ಬೆಣ್ಣೆಯನ್ನು ಆಹಾರಕ್ಕೆ ಸೇರಿಸುವುದರಿಂದ ಆಹಾರದ ಪರಿಮಳ ಮತ್ತು ರುಚಿಯು ಹೆಚ್ಚಾಗುತ್ತದೆ.

ಬೆಣ್ಣೆಯಲ್ಲಿರುವ ಕೊಬ್ಬಿನಂಶವಾದ ಗ್ಲೈಕೋಸ್ಫಿಂಗೊಲಿಪಿಡ್ಸ್ ಜಠರಕ್ಕೆ ಬ್ಯಾಕ್ಟಿರಿಯಾ ಸೋಂಕು ತಾಗದಂತೆ ರಕ್ಷಣೆ ಮಾಡುತ್ತದೆ. ಬೆಣ್ಣೆಯಲ್ಲಿ ವಿಟಮಿನ್ ಎ ಅಧಿಕ ಇರುವುದರಿಂದ ಥೈರಾಯ್ಡ್ ಗ್ರಂಥಿ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

ಬೆಣ್ಣೆಯಲ್ಲಿ ವೂಲ್ಜನ್ ಫ್ಯಾಕ್ಟರ್ ಎಂಬ ಅಂಶವಿದ್ದು, ಇದು ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತುಪ್ಪ ಹಾಗೂ ಬೆಣ್ಣೆ ಎರಡೂ ಆರೋಗ್ಯಕರವಾದ ಆಹಾರವಾಗಿದ್ದು ಅದರಲ್ಲಿರುವ ಪೋಷಕಾಂಶಗಳು ಇದೆ. ಆದರೆ ಲ್ಯಾಕ್ಟೋಸ್ ಅಸಮತೋಲನ ಇರವವರಿಗೆ ಬೆಣ್ಣೆಗಿಂತ ತುಪ್ಪ ಅತ್ಯುತ್ತಮವಾದ ಆಹಾರವಾಗಿದೆ.

ಕೆಲವರಿಗೆ ಬೆಣ್ಣೆ ತಿಂದರೆ ಅಲರ್ಜಿ ಉಂಟಾಗುತ್ತದೆ. ಅದಕ್ಕೆ ಕಾರಣ ಅದರಲ್ಲಿರುವ ಲ್ಯಾಕ್ಟೋಸ್ ಅಂಶ. ಇದರಲ್ಲಿರುವ ಹಾಲಿನ ಪ್ರೊಟೀನ್ ಲ್ಯಾಕ್ಟೋಸ್ ಅಸಮತೋಲನ ಇರುವ ವ್ಯಕ್ತಿಯಲ್ಲಿ ಗುಳ್ಳೆಗಳು, ತುರಿಕೆ, ಅಸ್ತಮಾ ಉಲ್ಭಣವಾಗುವಂತಹ ತೊಂದರೆಗಳು ಕಾಣಿಸಿಕೊಳ್ಳುವುದು. ಆದರೆ ತುಪ್ಪದಲ್ಲಿ ಹಾಲಿನ ಯಾವುದೇ ಪ್ರೊಟೀನ್ ಅಂಶವಿಲ್ಲದಿರುವ ಕಾರಣ ಲ್ಯಾಕ್ಟೋಸ್ ಅಸಮತೋಲನ ಇರುವವರಿಗೆ ತುಪ್ಪ ಒಳ್ಳೆಯದು.

Related