ನವದೆಹಲಿ: ಇಂದು ಸಂಸತ್ ಅಧಿವೇಶನ ಪ್ರಾರಂಭವಾಗಿದ್ದು ಈ ಸಂಸತ್ತಿನಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಸೋಮವಾರ ಜುಲೈ 22) ರಂದು 2023-2024ನೇ ಸಾಲಿನ ಆರ್ಥಿಕ ಸಮೀಕ್ಷೆ ವರದಿ ಪ್ರಸ್ತುತಪಡಿಸಿದ್ದಾರೆ.
ಇನ್ನು ಮಧ್ಯಾಹ್ನ 1:00 ಗಂಟೆಗೆ ಲೋಕಸಭೆಯಲ್ಲಿ ಮತ್ತು 2:00ಗೆ ರಾಜ್ಯಸಭೆಯಲ್ಲಿ ಈ ವರದಿಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿದ್ದಾರೆ. ಇನ್ನು ನಾಳೆ (ಜುಲೈ 23) ರಂದು ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಇದನ್ನೂ ಓದಿ: ಹೊಸ ದಾಖಲೆ ಸೃಷ್ಟಿಸುತ್ತಿರುವ ನಿರ್ಮಲಾ ಸೀತಾರಾಮನ್
ಬಜೆಟ್ ಮಂಡನೆಗೆ ಒಂದು ದಿನ ಆರ್ಥಿಕ ಸಮೀಕ್ಷೆ ವರದಿಯನ್ನು ಪ್ರಸ್ತುತಪಡಿಸಲಾಗುತ್ತದೆ. ಇದು ಬಜೆಟ್ನ ಪೂರ್ವಭಾವಿ ಆರ್ಥಿಕ ಅವಲೋಕನದ ದಾಖಲೆಯಾಗಿರುತ್ತದೆ. ದೇಶದ ಒಟ್ಟಾರೆ ಆರ್ಥಿಕ ಚಿತ್ರಣ ಹೇಗಿದೆ ಎಂಬುದನ್ನು ಈ ಸಮೀಕ್ಷೆ ಸುಳಿವು ನೀಡುತ್ತದೆ.
#WATCH | Economic Survey 2023-2024 tabled in Lok Sabha by Union Finance Minister Nirmala Sitharaman. pic.twitter.com/XxBVhgW4Lq
— ANI (@ANI) July 22, 2024