ವಿಶ್ವದ ಅತಿ ದೊಡ್ಡ ತ್ರಿವರ್ಣ ಧ್ವಜ ತಯಾರಿಕೆಯಲ್ಲಿ ಚಂಡೀಗಢದ ಜನತೆ

ವಿಶ್ವದ ಅತಿ ದೊಡ್ಡ ತ್ರಿವರ್ಣ ಧ್ವಜ ತಯಾರಿಕೆಯಲ್ಲಿ ಚಂಡೀಗಢದ ಜನತೆ

ಚಂಡೀಗಢ, ಆಗಸ್ಟ್ 13: ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ದೇಶವು ‘ಆಜಾದಿ ಕಾ ಅಮೃತ್ ಮಹೋತ್ಸವ’ವನ್ನು ಆಚರಿಸುತ್ತಿದೆ. ಪ್ರತಿ ಮನೆ ಮನೆಗೂ ತ್ರಿವರ್ಣ ಧ್ವಜ ಅಭಿಯಾನ ನಡೆಸಲಾಗುತ್ತಿದೆ. ಅಲ್ಲದೇ ಈ ಬಾರಿ ತ್ರಿವರ್ಣ ಧ್ವಜದ ಹಲವು ದಾಖಲೆಗಳು ಕೂಡ ನಿರ್ಮಾಣವಾಗುತ್ತಿವೆ.

ಇಂದು ಚಂಡೀಗಢದಲ್ಲಿ ವಿಶ್ವದ ಅತಿದೊಡ್ಡ ರಾಷ್ಟ್ರಧ್ವಜದ ಮಾನವ ಚಿತ್ರವನ್ನು ಪ್ರಸ್ತುತಪಡಿಸಲಾಯಿತು. ಇದರಲ್ಲಿ ತ್ರಿವರ್ಣ ಧ್ವಜಗಳನ್ನು ಧರಿಸಿದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಸ್ಥಳದಿಂದಲೇ ನೇರ ಪ್ರಸಾರ ಕೂಡ ಮಾಡಲಾಗಿತ್ತು. ಉತ್ಸಾಹದಿಂದ ಜನರು ಹೇಗೆ ಭಾಗವಹಿಸಿದರು ಎಂಬುದನ್ನು ನೀವು ವಿಡಿಯೊದಲ್ಲಿ ನೋಡಬಹುದು.

ಭಾರತವು ಈ ವರ್ಷ ಆಗಸ್ಟ್ 15 ರಂದು 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ ಮತ್ತು ‘ಆಜಾದಿ ಕಾ ಅಮೃತ್ ಮಹೋತ್ಸವ’ ಆಚರಿಸಲು ‘ಹರ್ ಘರ್ ತಿರಂಗ’ ಅಭಿಯಾನದ ಭಾಗವಾಗಿ 75ನೇ ಸ್ವಾತಂತ್ರ್ಯ ದಿನಾಚರಣೆಗೆ ತಮ್ಮ ಮನೆಯಲ್ಲಿ ಭಾರತೀಯ ರಾಷ್ಟ್ರಧ್ವಜವನ್ನು ಹಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ನಾಗರಿಕರನ್ನು ಒತ್ತಾಯಿಸಿದ್ದಾರೆ.

ಆಗಸ್ಟ್ 2 ರಿಂದ 15 ರ ನಡುವೆ ಸಾಮಾಜಿಕ ಮಾಧ್ಯಮ ಖಾತೆಗಳ ಪ್ರೊಫೈಲ್ ಚಿತ್ರವಾಗಿ ‘ತಿರಂಗಾ’ ಅನ್ನು ಬಳಸಲು ಪ್ರಧಾನಿ ಮೋದಿ ನಾಗರಿಕರನ್ನು ಕೇಳಿಕೊಂಡಿದ್ದಾರೆ. “ಭಾರತವು ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸುತ್ತಿದೆ. ನಾವೆಲ್ಲರೂ ಅದ್ಭುತ ಮತ್ತು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದೇವೆ” ಎಂದು ಪ್ರಧಾನಿ ಮೋದಿ ತಮ್ಮ ‘ಮನ್ ಕಿ ಬಾತ್’ ನಲ್ಲಿ ಹೇಳಿದರು. ಅನೇಕರು ‘ಹರ್ ಘರ್ ತಿರಂಗ’ ಅಭಿಯಾನದಲ್ಲಿ ಭಾಗವಹಿಸುತ್ತಿದ್ದಾರೆ.

 

Related