ಪಿಡಿಓ ಸಾವಿನ ತನಿಖೆಗೆ ಮನವಿ

ಪಿಡಿಓ ಸಾವಿನ ತನಿಖೆಗೆ ಮನವಿ

ಔರಾದ್ : ತಾಲ್ಲೂಕಿನ ಜಂಬಗಿ ಗ್ರಾ.ಪಂಯ ಪ್ರಭಾರಿ ಪಂಚಾಯತ ಅಭಿವೃದ್ಧಿ ಅಧಿಕಾರಿ ರಮೇಶ ಲೋಹಾರ ರವರು ನಿಗೂಢವಾಗಿ ಮರಣ ಹೊಂದಿರುವುದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಔರಾದ್ ತಾಲ್ಲೂಕು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಔರಾದ್ ಘಟಕದ ವತಿಯಿಂದ ಮಂಗಳವಾರ ತಹಶೀಲ್ದಾರರವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಬಳಿಕ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮೃತ ರಮೇಶ ಲೋಹಾರ ರವರಿಗೆ ಮೌನಾಚರಣೆ ಮಾಡುವ ಮೂಲಕ ಶೃದ್ಧಾಂಜಲಿ ಸಲ್ಲಿಸಲಾಯಿತು.

ಈ ವೇಳೆ ಸಂಘದ ಪಂದಾಧಿಕಾರಿಗಳು ಮಾತನಾಡಿ, ಮೃತ ಅಭಿವೃದ್ಧಿ ಅಧಿಕಾರಿಗೆ ಸಿಗಬೇಕಾದ ಸೌಲಭ್ಯಗಳು ನೀಡಬೇಕು ಮತ್ತು ಸಾವಿನ ಬಗ್ಗೆ ತನಿಖೆ ನಡೆಸಬೇಕು, ಸರ್ಕಾರಿ ನೌಕರರು ಅನೇಕ ಒತ್ತಡಗಳ ಮಧ್ಯೆ ಜೀವ ಭಯವಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದು ಇಂತಹ ಘಟನೆಗಳಿಂದ ಪ್ರತಿಯೊಬ್ಬರ ಮನೋಬಲ ಕುಗ್ಗಿ ಕರ್ತವ್ಯ ನಿರ್ವಹಿಸಲು ತುಂಬಾ ಸಮಸ್ಯೆಯಾಗುತ್ತಿದೆ. ಹೀಗಾಗಿ ಸರ್ಕಾರಿ ನೌಕರರ ಉತ್ತಮ ರೀತಿಯಿಂದ ಕರ್ತವ್ಯ ನಿರ್ವಹಿಸುವ ವಾತಾವರಣ ನಿರ್ಮಿಸಿ ಇಂತಹ ಘಟನೆಗಳು ಮರುಕಳಿಸದಂತೆ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೌಕರ ಸಂಘದ ಅಧ್ಯಕ್ಷÀ ಶಿವಕುಮಾರ ಘಾಟೆ ತಿಳಿಸಿದರು.

ನಂತರ ತಹಶೀಲ್ದಾರರವರು ಮಾತನಾಡಿ, ನಿಮ್ಮ ಮನವಿಯ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ, ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಸುನೀಲ್ ಕುಮಾರ್ ಕಸ್ತೂರೆ, ಸಹ ಕಾರ್ಯದರ್ಶಿ ಸಂಗಮೇಶ ಕೂಡ್ಲೆ, ಪಿಡಿಒ ಸಂಘದ ತಾಲ್ಲೂಕು ಅಧ್ಯಕ್ಷ ನಾಗೇಶ್ ಮುಕ್ರಂಬೆ, ಜಿತೇಂದ್ರ ಪಿಡಿಓ, ವಿನೋದ್ ಕುಲಕರ್ಣಿ ಮೈಬೂಬ್ ಪಾಷಾ, ಸಂಗಮೇಶ್, ಶರಣಪ್ಪ ಗಾದಗೆ, ಕೃಷ್ಣಪ್ಪ ಚೌವ್ಹಾನ, ನರಸಿಂಹನೆ ಮಾನೆ, ಶ್ವೇತಾ, ಅಮರ ಬಿರಾದಾರ, ಮಹೇಶ ಪವಾರ್, ಸಂಗಮೇಶ ಕೂಡಲೆ, ಸುನೀಲ್ ಕಸ್ತೂರೆ, ತಾಲ್ಲೂಕಿನ ಎಲ್ಲಾ ಪಿಡಿಒ ಅಧಿಕಾರಿಗಳು, ತಾ.ಪಂ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಸಿಬ್ಬಂದಿಗಳು ಇನ್ನಿತರರಿದ್ದರು.

Related