ಪಂತ್–ಪಾಂಡ್ಯ ಜೋಡಿ ಗೆಲುವಿನ ರೂವಾರಿಗಳು..

ಪಂತ್–ಪಾಂಡ್ಯ ಜೋಡಿ ಗೆಲುವಿನ ರೂವಾರಿಗಳು..

ನವದೆಹಲಿ, ಜು 19 : ಇಂಗ್ಲೆಂಡ್ ವಿರುದ್ಧ ಇತ್ತೀಚೆಗೆ ನಡೆದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನು ಭಾರತ ತಂಡ ೨–೧ ಅಂತರದದಿಂದ ಗೆದ್ದು ಬೀಗಿದೆ. ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಆಟಕ್ಕೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದ್ದವು. ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ೨೫೯ ರನ್ ಗಳಿಸಿ ಆಲೌಟ್ ಆಗಿತ್ತು. ಈ ಸವಾಲಿನ ಗುರಿ ಬೆನ್ನತ್ತಿದ ಭಾರತ ೭೨ ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ಈ ಹಂತದಲ್ಲಿ ಜೊತೆಯಾದ ಪಂತ್ ಹಾಗೂ ಪಾಂಡ್ಯ ಐದನೇ ವಿಕೆಟ್ ಪಾಲುದಾರಿಕೆಯಲ್ಲಿ ೧೩೩ ರನ್ ಕೆಲಹಾಕಿ ಭಾರತಕ್ಕೆ ಜಯ ತಂದುಕೊಟ್ಟಿದ್ದರು. ಪಾಂಡ್ಯ ೫೫ ಎಸೆತಗಳಲ್ಲಿ ೭೧ ರನ್ ಬಾರಿಸಿದರೆ, ಅಜೇಯ ಆಟವಾಡಿದ ಪಂತ್ ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ (೧೨೫ ರನ್) ಸಿಡಿಸಿ ಸಂಭ್ರಮಿಸಿದರು.

೨೦೦೫ ರಿಂದ ೨೦೧೭ರ ವರೆಗೆ ಧೋನಿ ಮತ್ತು ಯುವರಾಜ್ ಹಲವು ಪಂದ್ಯಗಳನ್ನು ಜೊತೆಯಾಗಿ ಗೆಲ್ಲಿಸಿಕೊಟ್ಟಿದ್ದರು. ಈ ಜೋಡಿ ಏಕದಿನ ಕ್ರಿಕೆಟ್‌ನ ೬೭ ಇನಿಂಗ್ಸ್ಗಳಲ್ಲಿ ೫೧.೭೩ರ ಸರಾಸರಿಯಲ್ಲಿ ೩,೧೦೫ ರನ್ ಕಲೆಹಾಕಿದೆ. ಇದರಲ್ಲಿ ೧೦ ಶತಕ ಹಾಗೂ ೧೩ ಅರ್ಧಶತಕದ ಜೊತೆಯಾಟಗಳೂ ಸೇರಿದ್ದವು. ಧೋನಿ, ಯುವಿ ೨೦೧೭ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ೪ನೇ ವಿಕೆಟ್‌ಗೆ ಅಜೇಯ ೨೫೬ ರನ್ ಕಲೆಹಾಕಿದ್ದರು.

Related