ನಮ್ಮ ಸಂವಿಧಾನವು ವೈವಿಧ್ಯಗಳ ಸಂಗಮರಾಚನಗೌಡ ಮುದ್ನಾಳ

ನಮ್ಮ ಸಂವಿಧಾನವು ವೈವಿಧ್ಯಗಳ ಸಂಗಮರಾಚನಗೌಡ ಮುದ್ನಾಳ

ಯಾದಗಿರಿ: ನಮ್ಮ ದೇಶದ ಸಂವಿಧಾನವು ಜನರಿಂದ ಜನರಿಗೋಸ್ಕರ ಜನರನ್ನು ಜನರೇ ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನೊಳಗೊಂಡ ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುವ ನಮ್ಮ ಸಂವಿಧಾನವು ವೈವಿಧ್ಯಗಳ ಸಂಗಮವಾಗಿರುತ್ತದೆ ಎಂದು ರಾಚನಗೌಡ ಮುದ್ನಾಳ ಹೇಳಿದರು.

ಬಿಜೆಪಿ ಜಿಲ್ಲಾ ಕಾರ್ಯಲಯದ ಸಭಾಂಗಣದಲ್ಲಿ ಇಂದು (ಮಂಗಳವಾರ ನ. 26) ರಂದು ಬೆಳಗ್ಗೆ ಸಂವಿಧಾನ ದಿನ ಆಚರಣೆ ನಿಮಿತ್ಯ ಡಾ: ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಫಲಪುಷ್ಪ ಸಮರ್ಪಸಿ ದೀಪ ಬೆಳಗುವುದರ ಮೂಲಕ ಪ್ರತಿಜ್ಞಾವಿಧಿಯೊಂದಿಗೆ ಸಂವಿಧಾನದ ಪೀಠಿಕೆ ಓದಿದ ಬಳಿಕ  ಮಾತನಾಡಿದ ಅವರು, ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ. ಇದನ್ನೂ ಓದಿ: ಭಾರತ ಜೋಡೋ ಕಾರ್ಯಕ್ರಮದಲ್ಲಿ ಡಿಸಿಎಂ ಭಾಗಿ

ಆದ್ದರಿಂದ ನವೆಂಬರ್ 26 ರಂದು ಪ್ರತೀ ವರ್ಷ ಈ ದಿನದಂದು ಭಾರತದಲ್ಲಿ ಸಂವಿಧಾನ ದಿನ ಎಂದು ಆಚರಿಸಲಾಗುತ್ತದೆ. ಅಲ್ಲದೇ ಈ ದಿನವನ್ನು ರಾಷ್ಟ್ರೀಯ ಕಾನೂನು ದಿನ ಅಥವಾ ನ್ಯಾಷನಲ್ ಲಾ ಡೇ ಎಂದೂ ಕರೆಯಲಾಗುತ್ತದೆ.

ದೇಶದ ಸ್ವಾತಂತ್ರ ಸಿಕ್ಕ ಎರಡು ವರ್ಷದ ಬಳಿಕ ಅಂದರೆ 1949 ರ ನವೆಂಬರ್ 26 ರಂದು ಭಾರತದ ಕಾನ್ಸ್​ಟಿಟ್ಯೂಯೆಂಟ್ ಅಸೆಂಬ್ಲಿ (ಸಂವಿಧಾನ ರೂಪಿಸಲು ರಚಿಸಲಾಗಿದ್ದ ಸಭೆ) ಸಂವಿಧಾನವನ್ನು ಅಧಿಕೃತವಾಗಿ ಅಳವಡಿಸಿತು.

ಅಂದರೆ ಸಂವಿಧಾನ ರಚನೆಯಾಗಿ ಸರಿಯಾಗಿ 72 ವರ್ಷ ಗತಿಸಿದೆ. ಮರು ವರ್ಷ, ಅಂದರೆ 1950, ಜನವರಿ 26ರಂದು ಸಂವಿಧಾನ ವಾಸ್ತವದಲ್ಲಿ ಜಾರಿಗೆ ಬಂದಿತು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡರಾದ ಮಹೇಶರೆಡ್ಡಿಗೌಡ ಮುದ್ನಾಳ, ಡಾ.ಶರಣಭೂಪಾಲ್ ರೆಡ್ಡಿ, ದೇವಿಂದ್ರನಾಥ ನಾದ್, ವೆಂಕಟರೆಡ್ಡಿ ಅಬ್ಬೆ ತುಮಕೂರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ ಜಿಲ್ಲಾ ವಕ್ತಾರರಾದ ಹಣಮಂತ ಇಟಗಿ ಜಿಲ್ಲಾ ಉಪಾಧ್ಯಕ್ಷರಾದ ಮಾರುತಿ ಕಲಾಲ್ ನಗರ ಸಭೆ ಸದಸ್ಯರಾದ ಸ್ವಾಮಿ ದೇವ್ ದಾಸನ್ಕೇರಿ ಮಲ್ಲಿಕಾರ್ಜುನ್ ಹೊನಗೇರಿ,ರಾಜಶೇಖರ ಸ್ನೇಹ ರಾಸಳಕರ, ಬಸವರಾಜ ಸೊನ್ನದ,ರಾಜಶೇಖರ ಕಾಡಮನೋರ, ಬಸವರಾಜ ಚಂಡರಕಿ, ಗೋಪಾಲ್ ದಾಸನ್ಕೇರಿ, ಮಲ್ಲಿಕಾರ್ಜುನ ಜಲ್ಲಪ್ಪನೂರ, ಚಂದ್ರಶೇಖರ ಕಡೆಸೂರ, ಮೌನೇಶ್ ಬೆಳಗೆರೆ,ಭೀಮ್ ಬಾಯಿ, ನಾಗಪ್ಪ ಗಚ್ಚಿನಮನಿ, ಶ್ರೀಕಾಂತ್ ಸುಂಗಲ್ಕರ್, ನಾಗರೆಡ್ಡಿ,ಇನ್ನಿತರ ಕಾರ್ಯಕರ್ತರು ಪಕ್ಷದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related