ಪೊಲೀಸರ ಕಾರ್ಯಾಚರಣೆ, ಗಂಧದ ಮರದ ತುಂಡುಗಳು ವಶಕ್ಕೆ

ಪೊಲೀಸರ ಕಾರ್ಯಾಚರಣೆ, ಗಂಧದ ಮರದ ತುಂಡುಗಳು ವಶಕ್ಕೆ

ಸಿರುಗುಪ್ಪ : ನಗರದ ಪೊಲೀಸ್ ಠಾಣೆಯ ಮುಂದೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಭಾನುವಾರ ಸಮಯದಲ್ಲಿ ಅಕ್ರಮವಾಗಿ ಕಡಿದು ಸಾಗಿಸುತ್ತಿದ್ದ ಗಂಧದ ಮರದ ತುಂಡುಗಳು ಟ್ರ‍್ಯಾಕ್ಟ್ರರ್ ಮತ್ತು ಆರೋಪಿಗಳ ಬಗ್ಗೆ ಮಾಹಿತಿ ನೀಡಿದರು.

ಖಚಿತ ಮಾಹಿತಿಯ ಮೇರೆಗೆ, ಬಳ್ಳಾರಿ ಡಿವೈಎಸ್ ಪಿಎಂಜಿ ಸತ್ಯ ನಾರಾಯಣರಾವ್ ಮಾರ್ಗದರ್ಶನದಲ್ಲಿ ಸಿರುಗುಪ್ಪ ಸಿಪಿಐ ಟಿಆರ್ ಪವಾರ್ ನೇತೃತ್ವದಲ್ಲಿ, ಎಎಸ್‌ಐ ಸೂರ್ಯ ನಾರಾಯಣ ಮತ್ತು ಸಿಬ್ಬಂದಿಗಳೊAದಿಗೆ ನಗರದ ವಿಶ್ವಜ್ಯೋತಿ ಶಾಲೆ ಹತ್ತಿರ, ಕಾಲುವೆ ಕಡೆಯಿಂದ ಬರುತ್ತಿದ್ದ ಮಹೀಂದ್ರ ಕಂಪೆನಿಯ ಟ್ರ‍್ಯಾಕ್ಟರ್ ಮತ್ತು ಟ್ರಾಲಿಯನ್ನು ನಿಲ್ಲಿಸಿ ದಾಳಿ ಮಾಡಿದಾಗ, ಅದರಲ್ಲಿ 1.60.000 ರೂ. ಬೆಲೆ ಬಾಳುವ ಗಂಧದ ಮರದ ತುಂಡುಗಳನ್ನು ಅಕ್ರಮವಾಗಿ ಕಡಿದು ಸಾಗಿಸಲಾಗುತ್ತಿತ್ತು. ಇವುಗಳು ಸುಮಾರು 5-6 ಅಡಿ ಉದ್ದದ 6 ತುಂಡುಗಳಿದ್ದು, ಈ ವೇಳೆ ಗಂಧದ ತುಂಡುಗಳನ್ನು ಸಾಗಿಸಲು ಬಳಸುವ ಟ್ರ‍್ಯಾಕ್ಟರ್, ಟ್ರಾಲಿಗಳನ್ನು ಜಪ್ತಿ ಮಾಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ 5 ಜನ ಆರೋಪಿಗಳಾದ ಬಾಲರಾಜ, ಶಿವ, ಪಶುಪತಿ, ಈರಣ್ಣ, ಕೋದಂಡ ರಾಮ ಇವರುಗಳ ವಿರುದ್ಧ ಠಾಣೆಯಲ್ಲಿ ಕರ್ನಾಟಕ ಅರಣ್ಯ ಅಧಿನಿಯಮ 1963 ಕಲಂ 379 ಐಪಿಸಿ ಅಡಿಯಲ್ಲಿ ಕಾನೂನು ಕ್ರಮಕ್ಕಾಗಿ ಪ್ರಕರಣ ದಾಖಲಿಸಿ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಸಂದರ್ಭದಲ್ಲಿ ಸಿಪಿಐ ಟಿಆರ್ ಪವಾರ್ ಕ್ರೈಂ ಪಿಎಸೈ ಕೆ. ನಾರಾಯಣಸ್ವಾಮಿ, ಎಎಸ್‌ಐ ಸೂರ್ಯ ನಾರಾಯಣ, ಮುನಿಸ್ವಾಮಿ, ಮುದುಕಯ್ಯ, ರಾಥೋಡ್, ಆನಂದ್ ಇನ್ನಿತರರಿದ್ದರು.

Related