ಶಹಾಪುರ: ತಾಲೂಕಿನ ಗುಂಡಳ್ಳಿ ತಾಂಡದಲ್ಲಿ ನಿರಂತರ ಜ್ಯೋತಿ ಲೈನ್ ಕೇವಲ ಮನೆಗೆ ಮಾತ್ರ ವಿದ್ಯುತ್ ಬಳಕೆ ಮಾಡಿಕೊಳ್ಳಬೇಕು ಆದರೆ ಕೃಷಿ ಪಂಪ್ ಸೇಟ್‌ಗೆ ಬಳಕೆ ಮಾಡಿಕೊಳ್ಳಬಾರದು ಎಂದು ತಿಳಿ ಹೇಳಿದ್ದಕ್ಕೆ ಅಧಿಕಾರಿ ಸೇರಿ ಇಬ್ಬರು ಲೈನ್ ಮ್ಯಾನ್ ಮೇಲೆ ತಾಂಡದ ಜನತೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಲ್ಲದೇ, ಹೊಡೆದು ಹಲ್ಲೆ ಮಾಡಿದ ಘಟನೆ ನಡೆದಿದೆ.
ದೋರನಹಳ್ಳಿ ಉಪ ವಿಭಾಗದ ಶಾಖೆಯ ಮೇಲಾಧಿಕಾರಿ ರಾಜಕುಮಾರ ತಂದೆ ಬಾಬು ಪೂಜಾರಿ, ಲೈನ್ ಮೇನ್ ಗಳಾದ ಮಲ್ಲಿಕಾರ್ಜುನ ತಂದೆ ನಾಗೇಂದ್ರ ನಾಟೇಕರ್, ಮತ್ತು ಇನ್ನೊರ್ವ ಲೈನ್ ಮೆನ್ ಅಂಬರೇಶ ತಂದೆ ಶಂಕರಯ್ಯ ಹಿರೇಮಠ ಹಲ್ಲೇಗೊಳಗಾದವರು.
ಗುಂಡಳ್ಳಿ ತಾಂಡಕ್ಕೆ ತೆರಳಿದ್ದ ವೇಳೆ ಮೂವರ ಮೇಲೆ ಹಲ್ಲೇ ಮಾಡಿದ್ದಾರೆ. ತಾಂಡಾದ ರಾಜು ತಂದೆ ದೇಸು ನಾಯಕ, ರವಿ ತಂದೆ ದೇಸು ನಾಯಕ, ದೇವರಾಜ ತಂದೆ ಭಾಗಣ್ಣ, ದೇಸುನಾಯಕನ ಮೊಮ್ಮಕ್ಕಳಾದ ರಾಹುಲ್ ಸೇರಿಕೊಂಡು ತಕರಾರು ಮಾಡುತ್ತಾ ಹಲ್ಲೆ ಮಾಡಿದ್ದಾರೆ. ಕರ್ತವ್ಯದ ಮೇಲೆದ್ದ ಅಧಿಕಾರಿ ಮತ್ತು ಇಬ್ಬರು ಲೈನ್ ಮ್ಯಾನ್ ಗಳಲ್ಲಿ ಮಲ್ಲಿಕಾರ್ಜುನ ಎನ್ನುವವರಿಗೆ ಕಟ್ಟಿಗೆಯಿಂದ ಹೊಡೆದು ಮತ್ತು ಮೊಳಕೈಯಲ್ಲಿ ಬೆನ್ನಿಗೆ ಹೊಡೆದು, ಕಾಲಿನಿಂದ ಹೊಡೆದಿದ್ದಾರೆ. ಇನ್ನೊರ್ವ ಲೈನ್ ಮ್ಯಾನ್ ಅಮರೇಶ ಹಿರೇಮಠ ಅವರಿಗೆ ಗಂಭೀರ ಗಾಯಗಳಾಗಿವೆ. ಇದರಿಂದ ನಾವು ಹೆದರಿ ಅಲ್ಲಿಂದ ಹೊಡಿ ಬಂದಿದ್ದೇವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಲಂ 126(2), 121(1), 132, 352, 351(2), 3(5) ಅಡಿಯಲ್ಲಿ ವಡಗೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಂತರ್ಜಾತಿ ವಿವಾಹಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು: ಸಿಎಂ
ನಿರಂತರ ಜ್ಯೋತಿ ಯೋಜನೆ ಅಡಿಯಲ್ಲಿ ಮನೆಗಳಿಗೆ ಮಾತ್ರ ವಿದ್ಯುತ್ ಬಳಕೆ ಮಾಡಬೇಕು, ಪಂಪ್ ಸೇಟ್‌ಗಳಿಗೆ ಬಳಕೆ ಮಾಡಬಾರದು ಎಂದು ಹೇಳಿದ ನನಗೆ ಮತ್ತು ಲೈನ್ ಮೇನ್ ಗಳಾದ ಮಲ್ಲಿಕಾರ್ಜುನ ಮತ್ತು ಅಮರೇಶ ಹಿರೇಮಠ ಮೇಲೆ ಅವಾಚ್ಯ ಶಬ್ಧದಿಂದ ನಿಂದಿಸಿ ಹಲ್ಲೇ ಮಾಡಿದ್ದಾರೆ. ಮತ್ತು ದೂರು ನೀಡಲು ಹೋದ ನಮಗೆ ಕೇಲ ರಾಜಕೀಯ ವ್ಯಕ್ತಿಗಳ ಕುಮ್ಮಕ್ಕಿನಿಂದ ಪೊಲೀಸರು ಸಹ ದೂರು ಪಡೆಯಲು ಕಾಲಹರಣ ಮಾಡಿದ್ದಾರೆ. ಕರ್ತವ್ಯದಲ್ಲಿದ್ದ ನನಗೆ ಮತ್ತು ನಮ್ಮ ಸಿಬ್ಬಂದಿ ಮೇಲೆ ಹಲ್ಲೆಯಾಗಿದ್ದು ಈ ಕುರಿತು ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು ಎಂದು ರಾಜಕುಮಾರ ಪೂಜಾರಿ ಮುಕ್ಕಾಂ ಮೇಲಾಧಿಕಾರಿ, ದೋರನಹಳ್ಳಿ ಉಪ-ವಿಭಾಗ ಶಾಖೆ ಇವರು ಹೇಳಿದರು.
ಗ್ರಾಮೀಣ ಭಾಗದಲ್ಲಿ ತೆರಳುವ ಲೈನ್ ಮ್ಯಾನ್‌ಗಳಿಗೆ ರಕ್ಷಣೆ ಇಲ್ಲಾದಂತಾಗಿದೆ. ಕರ್ತವ್ಯದ ಮೇಲೆ ಇದ್ದ ನಮ್ಮ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದು ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಮರೆಪ್ಪ ಕಡೆಕರ್ ಎಇಇ ಹೇಳಿದರು.
ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುವ ನೌಕರರಿಗೆ ರಕ್ಷಣೆ ಇಲ್ಲದಂತಾಗಿದ್ದು, ರಾಜಕೀಯ ವ್ಯಕ್ತಿಗಳ ಆಟಕ್ಕೆ , ಪುಡಾರಿಗಳ ಕಾಟಕ್ಕೆ ಅಧಿಕಾರಿಗಳು ನೈತಿಕ ಶೌರ್ಯ ಕುಸಿದು ಹೋಗುತ್ತಿದ್ದು ಮಾನಸಿಕವಾಗಿ ಕುಗ್ಗಿಸುವಂತ ಕೆಲಸಗಳು ನಡೆಯುತ್ತಿದ್ದು, ಸರ್ಕಾರಿ ನೌಕರರಿಗೆ ರಕ್ಷಣೆ ಒದಗಿಸುವ ಕೆಲಸ ಮಾಡಬೇಕು ಎಂದು ನಮ್ಮ ಕರ್ನಾಟಕ ಸೇನೆಯ ಪ್ರದಾನ ಸಂಚಾಲಕ ಭೀಮಣ್ಣ ಶಖಾಪುರ ಹೇಳಿದರು.