ಎನ್.ಎಸ್.ಬೊಸೆರಾಜು- ಪ್ರವಾಸೋದ್ಯಮ ಮತ್ತು ವಿಜ್ಞಾನ ಮತ್ತು ಟೆಕ್ನಾಲಜಿ

ಎನ್.ಎಸ್.ಬೊಸೆರಾಜು- ಪ್ರವಾಸೋದ್ಯಮ ಮತ್ತು ವಿಜ್ಞಾನ ಮತ್ತು ಟೆಕ್ನಾಲಜಿ

ಬೆಂಗಳೂರು: ಅಚ್ಚರಿ ಎಂಬಂತೆ ಸಿದ್ಧರಾಮಯ್ಯ ಸಂಪುಟದಲ್ಲಿ ಮಾಜಿ ಶಾಸಕ ಎನ್.ಎಸ್.ಬೋಸರಾಜು ಸಚಿವರಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಇಂದು ರಾಜ್ಯಭವನದ ಗಾಜಿನ ಮನೆಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಸಂಪುಟ ದರ್ಜೆಯ ಸಚಿವರಾಗಿ ಪ್ರವಾಸೋದ್ಯಮ ಮತ್ತು ವಿಜ್ಞಾನ ಮತ್ತು ಟೆಕ್ನಾಲಜಿ ಇಲಾಖೆಯ ಪ್ರಮಾಣ ವಚನ ಸ್ವೀಕರಿಸಿದರು. ಶಾಸಕರು ಅಲ್ಲ, ವಿಧಾನಪರಿಷತ್ ಸದಸ್ಯರೂ ಅಲ್ಲದ ಬೋಸರಾಜು ಅವರು ಸಚಿವರಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ರಾಯಚೂರು ನಗರ ಕ್ಷೇತ್ರದ ಟಿಕೆಟ್​ ಬಿಟ್ಟುಕೊಟ್ಟಿದ್ದರಿಂದ ಅವರಿಗೆ ಹೈಕಮಾಂಡ್​ ಕೊಟ್ಟ ಮಾತಿನಂತೆ ಸಚಿವ ಸ್ಥಾನ ನೀಡಿದೆ.

 

Related