ಬೊಮ್ಮನಹಳ್ಳಿಯಲ್ಲಿ ನೂತನ ಕ್ರೀಡಾಂಗಣ ಲೋಕಾರ್ಪಣೆ

ಬೊಮ್ಮನಹಳ್ಳಿಯಲ್ಲಿ ನೂತನ ಕ್ರೀಡಾಂಗಣ ಲೋಕಾರ್ಪಣೆ

ಬೊಮ್ಮನಹಳ್ಳಿ: ಬೊಮ್ಮನಹಳ್ಳಿಯ ಬಿಳೇಕಹಳ್ಳಿ ವಿಜಯಾಬ್ಯಾಂಕ್ ಬಡಾವಣೆಯಲ್ಲಿ ದಿವಂಗತ ಹೆಚ್​ಎನ್ ಅನಂತ್ ಕುಮಾರ್ ಕ್ರೀಡಾಂಗಣವನ್ನು ಶಾಸಕ ಎಂ ಸತೀಶ್ ರೆಡ್ಡಿ ಮತ್ತು ಸಂಸದ ತೇಜಸ್ವಿ ಸೂರ್ಯ ಉದ್ಘಾಟಿಸಿದರು.

ಶಾಸಕ ಸತೀಶ್ ರೆಡ್ಡಿ ಮಾತನಾಡಿ 5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಗ್ಯಾಲರಿ, ಸುತ್ತಲೂ ತಂತಿ ಬೇಲಿ ಒಳಗೊಂಡ ಕ್ರೀಡಾಂಗಣವನ್ನು ಇಂದು ಲೋಕಾರ್ಪಣೆಗೊಳಿಸಲಾಗಿದೆ. ದಿ ಅನಂತ್ ಕುಮಾರ್ ಇದ್ದಿದ್ದರೆ ಬಹಳಷ್ಟು ಸಂತಸ ವ್ಯಕ್ತಪಡಿಸುತಿದ್ದರು ಎಂದು ಸ್ಮರಿಸಿದರು.

ನಂತರ ಮಾತನಾಡಿ ಬೇಗೂರು ನ್ಯಾನಪನಹಳ್ಳಿ ಬಳಿ 14 ಎಕರೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ತಲೆ ಎತ್ತಲಿದೆ, ಒಳಾಂಗಣ ಹೊರಾಂಗಣ ಕ್ರೀಡೆಗಳಿಗೆ ಅದು ಸಾಕ್ಷಿಯಾಗಲಿದೆ ಎಂದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ ಕೊರೊನಾದಲ್ಲಿ ಉಚಿತವಾಗಿ ಲಸಿಕೆಯನ್ನು ಯಾವ ದೇಶವೂ ಭಾರತದಂತೆ ನೀಡಲಿಲ್ಲ. ನೂರು ಜನೌಷಧಿ ಕೇಂದ್ರಗಳನ್ನು ತೆರೆಯುವ ಮುಖಾಂತರ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ದಾಖಲೆ ಬರೆಯಲಿದೆ. ಈ ತಿಂಗಳು ಜಯನಗರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಉಚಿತ ಡಯಾಲಿಸಿಸ್ ಕೇಂದ್ರವನ್ನು ತೆರೆಯಲಾಗುತ್ತದೆ. ಅದೂ ಕೌಂಟರ್ ಇಲ್ಲದೆಯೇ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ವಿದ್ಯಾನಿಧಿ ಯೋಜನೆಯಾಡಿ 8 ರಿಂದ ಪಿಯುಸಿವರೆಗೆ 75% ಅಂಕ ಗಳಿಸಿದವರಿಗೆ 5 ರಿಂದ 10ಸಾವಿರ ರೂ. ಚೆಕ್‌ ನೀಡಿ ಶುಲ್ಕ ಭರಿಸಲಾಗುವುದು ಎಂದರು. ಈ ಬಾರಿ ಚುನಾವಣೆಯಲ್ಲಿ ಸತೀಶಣ್ಣ ಅವರಿಗೆ ಒಂದು ಲಕ್ಷಕ್ಕೂ ಅಧಿಕ ಮತದಿಂದ ಗೆಲ್ಲುವುದು ಖಚಿತ ಎಂದು ಭವಿಷ್ಯ ನುಡಿದರು.

Related