ರೇಣುಕಾ ಸ್ವಾಮಿ ಮನೆಗೆ ಹೊಸ ಅತಿಥಿ ಆಗಮನ..!

  • In State
  • October 16, 2024
  • 460 Views
ರೇಣುಕಾ ಸ್ವಾಮಿ ಮನೆಗೆ ಹೊಸ ಅತಿಥಿ ಆಗಮನ..!

ಚಿತ್ರದುರ್ಗ: ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ಮತ್ತು ಗ್ಯಾಂಗ್ ಸೇರಿಕೊಂಡು ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟ ದರ್ಶನ್ ಹಾಗೂ ಇನ್ನಿತರ ಆರೋಪಿಗಳು ಜೈಲು ಸೇರವಾಸ ಅನುಭವಿಸುತ್ತಿದ್ದಾರೆ.

ಇನ್ನು ಕೊಲೆಗೀಡಾದ ರೇಣುಕಾ ಸ್ವಾಮಿ ಪತ್ನಿ ಗರ್ಭಿಣಿಯಾಗಿದ್ದು, ಇದೀಗ ರೇಣುಕಾ ಸ್ವಾಮಿಯವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದರಿಂದ ರೇಣುಕಾ ಸ್ವಾಮಿ ಕುಟುಂಬದಲ್ಲಿ ಕಳೆದುಕೊಂಡ ಮಗನ ನೋವನ್ನು ಮೊಮ್ಮಗ ಹುಟ್ಟಿರುವುದರಿಂದ ಸಂತಸ ಮನೆ ಮಾಡಿದೆ. ಇದನ್ನೂ ಓದಿ: ಇಂದು ದರ್ಶನ್-ಪವಿತ್ರಾ ಜಾಮೀನು ಅರ್ಜಿ ವಿಚಾರಣೆ

ಹೌದು, ಇಂದು ಬೆಳಗಿನ ಜಾವ 7 ಗಂಟೆಗೆ ಗಂಡು ಮಗುವನ್ನು ಬರಮಾಡಿಕೊಂಡಿದ್ದಾರೆ. ಮಗನನ್ನು ಕಳೆದುಕೊಂಡ ನೋವಿನಲ್ಲಿರುವ ರೇಣುಕಸ್ವಾಮಿ ಪೋಷಕರಿಗೆ ಮೊಮ್ಮಗನ ಆಗಮನ ಖುಷಿ ತಂದಿದೆ.

ರೇಣುಕಾಸ್ವಾಮಿ ಹತ್ಯೆ ಸಮಯದಲ್ಲಿ ಪತ್ನಿ ಸಹನಾ ಗರ್ಭಿಣಿಯಾಗಿದ್ದರು. ಈ ವೇಳೆ ಪತಿಯ ಹತ್ಯೆಯಿಂದ ಸಹನ ಕಂಗಲಾಗಿದ್ದರು. ಅಲ್ಲದೆ ಪವಿತ್ರಾ ಗೌಡ ಓರ್ವ ಹೆಣ್ಣಾಗಿ ರೇಣುಕಾಸ್ವಾಮಿಯನ್ನು ಕೊಲೆ ಮಾಡುವ ಹಂತಕ್ಕೆ ಹೋಗಬಾರದಿತ್ತು. ಅದರ ಬದಲು ಪೊಲೀಸರಿಗೆ ದೂರು ನೀಡಬೇಕಿತ್ತು ಎಂದು ಕಣ್ಣೀರಿಟ್ಟಿದ್ದರು.

 

Related