ಹೊಸ ಕೊರೊನಾ ವೈರಸ್ ಪತ್ತೆ

ಹೊಸ ಕೊರೊನಾ ವೈರಸ್ ಪತ್ತೆ

ಬೀಜಿಂಗ್, ಫೆ, 23  : ಮಾರಣಾಂತಿಕ ಕೊರೊನಾ ವೈರಸ್ ತಗುಲುತ್ತಿರುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಚೀನಾದಲ್ಲಿ ಈಗ ಸುಮಾರು 648 ಹೊಸ ಪ್ರಕರಣಗಳು ಪತ್ತೆಯಾಗಿವೆ. ಆದರೆ ವೈರಸ್ ನಿಂದಾದ ಸಾವಿನ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ವರದಿಯಾಗಿದೆ. ಚೀನಾದ ರಾಷ್ಟ್ರೀಯ ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಶುಕ್ರವಾರ 397ರಷ್ಟು ಮಂದಿಗೆ ಸೋಂಕು ತಾಗಿದ್ದು, ಪ್ರಮಾಣ ಶನಿವಾರದಂದು ಇದು ಏರಿಕೆಯಾಗಿದೆ. ಶನಿವಾರ 648 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

ದೇಶದಲ್ಲಿ ಕೊರೊನಾ ವೈರಸ್ ನಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಇಳಿಕೆಯಾಗಿದೆ. ಶನಿವಾರ 97 ಜನರು ಸಾವನ್ನಪ್ಪಿದ್ದು ಹುಬೇ ಪಾಂತ್ಯದಲ್ಲಿ ಓರ್ವ ಮಾತ್ರ ಮರಣ ಹೊಂದಿದ್ದಾನೆ. ಒಟ್ಟು ಮರಣ ಸಂಖ್ಯೆ 2442 ಕ್ಕೆ ಮುಟ್ಟಿದೆ.

Related