ಶಹಾಪುರ: ನೇತ್ರದಾನ ಮಾಡಲು ವಯಸ್ಸಿನ ಮಿತಿಯಿಲ್ಲ ಮೃತಪಟ್ಟ 6 ಗಂಟೆಯ ಒಳಗಾಗಿ ನೇತ್ರದಾನ ಮಾಡುವ ಮೂಲಕ ಮತ್ತೊಬ್ಬರ ಬಾಳೀಗೆ ಬೆಳಕಾಗಬೇಕು ಎಂದು ನೇತ್ರ ತಜ್ಞ ಡಾ. ಜಗದೀಶ್ ಉಪ್ಪೀನ್ ಹೇಳಿದರು. ತಾಲೂಕಿನ ಅರಕೇರಾ ಬಿ ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆ.25 ರಿಂದ ಸೆ.8 ರವರೆಗೆ 36 ನೇ ರಾಷ್ಟ್ರೀಯ ನೇತ್ರದಾನ ಪ್ರಾಕ್ಷಿಕ ದಿನಾಚರಣೆಯನ್ನು ಆಚರಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾನಾಡಿದ ಅವರು ಎ ಅನ್ನಾಂಗದ ಕೊರತೆಯಿಂದ ಮಕ್ಕಳು ಅಂಧರಾಗಬಹುದು ಕುರುಡುತನ ಬಾರದಂತೆ ವಿಟಮಿನ್ ಎ ದ್ರಾವಣ ನೀಡಲಾಗುವುದು. ಕಣ್ಣಿನಲ್ಲಿ ಧೂಳು ಬಿದ್ದಾಗ ನಾಟಿ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವ ಬದಲು ನೇರವಾಗಿ ನೇತ್ರ ತಜ್ಞರನ್ನು ಸಂಪರ್ಕಿಸಿ ಕಣ್ಣಿನ ರಕ್ಷಣೆ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಪ್ರತಿವರ್ಷ 5600 ನೇತ್ರದಾನ ಮಾಡಲಾಗುತ್ತಿವೆ. ಸುಮಾರು 1.5 ಲಕ್ಷ ಜನರು ಅಂಧತ್ವದಿಂದ ಬಳಲುತ್ತಿದ್ದು, ದಾನಕ್ಕಾಗಿ ಕಾಯುತ್ತಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಡಾ ವೆಂಕಟೇಶ ಬೈರಮಡಗಿ, ಡಾ ಯಲ್ಲಪ್ಪ ಹುಲಕಲ್, ಡಾ.ಪದ್ಮಾನಂದ, ಡಾ.ಶೃತಿ, ನೇತ್ರಾಧಿಕಾರಿಗಳಾದ ಉಮೇಶ್ ಇನ್ನಿತರರಿದ್ದರು.