ರಾಷ್ಟ್ರ ಧ್ವಜಗಳನ್ನು ಸುರಕ್ಷಿತವಾಗಿ ತೆಗೆದಿಡಲು ಮನವಿ

ರಾಷ್ಟ್ರ ಧ್ವಜಗಳನ್ನು ಸುರಕ್ಷಿತವಾಗಿ ತೆಗೆದಿಡಲು ಮನವಿ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಾಗರಿಕರು “75ನೇ ಅಮೃತ ಮಹೋತ್ಸವದ” ಅಂಗವಾಗಿ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವ ಕಾರ್ಯವನ್ನು  ಯಶಸ್ವಿಗೊಳಿಸಿದ್ದು, ತಮ್ಮ-ತಮ್ಮ ಮನೆಗಳು, ವಾಣಿಜ್ಯ ಮಳಿಗೆಗಳು, ಕಛೇರಿಗಳು, ಸಂಘ ಸಂಸ್ಥೆಗಳ ಮೇಲೆ ಹಾರಿಸಿದ “ರಾಷ್ಟ್ರ ಧ್ವಜವನ್ನು” ಜೋಪಾನವಾಗಿ ತೆಗೆದು “ಅಶೋಕ ಚಕ್ರ” ಮೇಲ್ಭಾಗದಲ್ಲಿ ಬರುವಂತೆ ಮಡಚಿಡಿ,  ಮಡಚಿದ ಧ್ವಜವನ್ನು ಧಕ್ಕೆ ಬಾರದ ಹಾಗೆ ಸುರಕ್ಷಿತ ಸ್ಥಳದಲ್ಲಿ ಇಡುವುದು ಪ್ರತಿ ನಾಗರಿಕರ ಆದ್ಯ ಕರ್ತವ್ಯವಾಗಿದೆ ಎಂದು ಶ್ರೀ ತುಷಾರ್ ಗಿರಿ ನಾಥ್ ಅವರು ತಿಳಿಸಿದರು.

ನಗರದ ಪಾಲಿಕೆ ಕಛೇರಿಗಳು, ರಸ್ತೆ ಬದಿ, ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವ ಧ್ವಜಗಳನ್ನು ತೆಗೆಯಲಾಗುತ್ತಿದೆ. ಅದರಂತೆ ನಾಗರಿಕರೆಲ್ಲರೂ ತಾವುಗಳು ಹಾರಿಸಿರುವ ರಾಷ್ಟ್ರ ಧ್ವಜಗಳನ್ನು ಸುರಕ್ಷಿತವಾಗಿ ತೆಗೆದಿಡಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಕೋರಿರುತ್ತಾರೆ.

Related