ಬೆಂಗಳೂರು: ತೆಲುಗು ಚಿತ್ರರಂಗದ ನಟ ನಾಗಚೈತನ್ಯವರು ಸಮಂತಾ ಅವರಿಗೆ ವಿಚ್ಛೇದನ ನೀಡಿದ ಬಳಿಕ ಮತ್ತೆ ತಮ್ಮ ಹಳೆಯ ಗೆಳತಿ ಶೋಭಿತಾ ಧುಲಿಪಾಲ್ ಅವರನ್ನು ವಿವಾಹ ಆಗಲು ಈಗಾಗಲೇ ಆಗಸ್ಟ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಇದೀಗ ಈ ಜೋಡಿಗಳು ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಹೌದು, ಖ್ಯಾತ ನಟಿ ಸಮಂತಾ ಅವರಿಗೆ ನಾಗ ಚೈತನ್ಯವರು ವಿಚ್ಛೇದನ ನೀಡಿದ ಬಳಿಕ ಇದೀಗ ಎರಡನೇ ಮದುವೆಗೆ ನಾಗ ಚೈತನ್ಯ ಅವರು ಮುಂದಾಗಿದ್ದು, ಇದೇ ಡಿಸೆಂಬರ್ ತಿಂಗಳಲ್ಲಿ ಶೋಭಿತ ಅವರನ್ನು ಮದುವೆಯಾಗಲಿದ್ದಾರೆ ಎಂಬ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಅವರ ಮದುವೆಯ ಆಮಂತ್ರಣ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ‘ಮ್ಯಾಕ್ಸ್’ ಸಿನಿಮಾ ರಿಲೀಸ್ ಬಗ್ಗೆ ಸುದೀಪ್ ಹೇಳಿದ್ದೇನು?
ಇನ್ನು ನಾಗ ಚೈತನ್ಯ ಹಾಗೂ ಶೋಭಿತಾ ಪರಸ್ಪರ ಪ್ರೀತಿಸಿದವರು. ಈಗ ಇವರು ವಿವಾಹ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಶೋಭಿತಾ ಸುದ್ದಿ ಆಗುತ್ತಾರೆ.
ನಾಗ ಚೈತನ್ಯ ಹಾಗೂ ಶೋಭಿಯಾ ಡಿಸೆಂಬರ್ 4ರಂದು ಮದುವೆ ಆಗಲಿದ್ದಾರೆ. ಶೋಭಿತಾ ಹಾಗೂ ನಾಗ ಚೈತನ್ಯ ವಿವಾಹ ಆಮಂತ್ರಣ ಸಿಕ್ಕವರು ಇದರ ಫೋಟೋನ ವೈರಲ್ ಮಾಡಿದ್ದಾರೆ. ಸದ್ಯ ಮದುವೆಗೆ ಸಿದ್ಧತೆ ನಡೆಯುತ್ತಿದೆ.