ಮೈಸೂರು ವಿ.ವಿ ಪದವಿ ಪರೀಕ್ಷೆ ಮುಂದೂಡಿಕೆ

ಮೈಸೂರು ವಿ.ವಿ ಪದವಿ ಪರೀಕ್ಷೆ ಮುಂದೂಡಿಕೆ

ಮೈಸೂರು: ಮೈಸೂರು ವಿಶ್ವವಿದ್ಯಾಲಯವು ಸೆ.3ರಂದು ಆರಂಭವಾಗಬೇಕಿದ್ದ ಪದವಿ ಪರೀಕ್ಷೆ ಸೆ.13ಕ್ಕೆ ಮುಂದೂಡಿದೆ.

ಸ್ನಾತಕ ಪದವಿಯ 6ನೇ ಸೆಮಿಸ್ಟರ್ (ಸಿಬಿಸಿಎಸ್/ ನಾನ್ ಸಿಬಿಸಿಎಸ್ ಫ್ರೆಷರ್ಸ್), 2ನೇ ಸೆಮಿಸ್ಟರ್ (ಸಿಬಿಸಿಎಸ್ ರಿಪಿಟರ್ಸ್) ಮತ್ತು 2, 4, 6ನೇ ಸೆಮಿಸ್ಟರ್ನ (ನಾನ್ ಸಿಬಿಸಿಎಸ್-ರಿಪಿಟರ್ಸ್) ಪದವಿ ಪರೀಕ್ಷೆಗಳನ್ನು ಕುಲಪತಿ ಆದೇಶದ ಮೇರೆಗೆ ಕಾರಣಾಂತರಗಳಿಂದ ಮುಂದೂಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಸದ್ಯದಲ್ಲೇ ಹೊರಡಿಸಲಾಗುವುದು ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related