ಮೈಸೂರು ರಸ್ತೆ – ಕೆಂಗೇರಿ ಮೆಟ್ರೋ ಆ.29 ರಿಂದ ಆರಂಭ

ಮೈಸೂರು ರಸ್ತೆ – ಕೆಂಗೇರಿ ಮೆಟ್ರೋ ಆ.29 ರಿಂದ ಆರಂಭ

ಬೆಂಗಳೂರು: ರೈಲೈ ಸುರಕ್ಷತಾ ಆಯುಕ್ತ ಅಭಯ್ ಕುಮಾರ್ ರೈ ಮೈಸೂರು ರಸ್ತೆಯಿಂದ ಕೆಂಗೇರಿ ವರೆಗೆ ನಿರ್ಮಾಣವಾಗಿರುವ ಮೆಟ್ರೋ ಮಾರ್ಗಕ್ಕೆ ಶನಿವಾರದಂದು ಸುರಕ್ಷತಾ ಪ್ರಮಾಣ ಪತ್ರವನ್ನು ನೀಡಿದ್ದಾರೆ.
ಈ ತಿಂಗಳ 11, 12 ರಂದು ಸುರಕ್ಷತಾ ಪರೀಕ್ಷೆ ನಡೆಸಿದರು. ಮೂರು ತಿಂಗಳಿನಿಂದ ಬಿಎಂಆರ್‌ಸಿಎಲ್ ಟ್ರಯಲ್ ರನ್ ನಡೆಸಲಾಗಿತ್ತು. ಮೈಸೂರು ರಸ್ತೆಯಿಂದ ಕೆಂಗೇರಿ ವರೆಗೆ 1560 ಕೋಟಿ ವೆಚ್ಚದಲ್ಲಿ ಮೆಟ್ರೋ ಮಾರ್ಗ ನಿರ್ಮಾಣವಾಗಿದೆ. ಆ.29 ರಂದು ಮಧ್ಯಾಹ್ನ 12ರಕ್ಕೆ ಜನರ ಸೇವೆಗೆ ಲಭ್ಯವಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿರವರಿಂದ ಚಾಲನೆ ನೀಡುತ್ತಾರೆ.

 

Related