ಕೊಲೆಗಡುಕರು, ಅತ್ಯಾಚಾರಿಗಳನ್ನು ಕಂಡಲ್ಲಿ ಗುಂಡಿಕ್ಕಿ ಇನ್ಕೌಂಟರ್ ಮಾಡಬೇಕು: ಯತ್ನಾಳ್

ಕೊಲೆಗಡುಕರು, ಅತ್ಯಾಚಾರಿಗಳನ್ನು ಕಂಡಲ್ಲಿ ಗುಂಡಿಕ್ಕಿ ಇನ್ಕೌಂಟರ್ ಮಾಡಬೇಕು: ಯತ್ನಾಳ್

ಬೆಂಗಳೂರು: ಸುಹಾಸ್‌ ಶೆಟ್ಟಿ ಹತ್ಯೆಯನ್ನು ಖಂಡಿಸಿ ರಾಜಕೀಯ ನಾಯಕರುಗಳು ಒಂದೊಂದು ರೀತಿ ಪ್ರತಿಕ್ರಿಯೆ ನೀಡುತ್ತಿದ್ದು, ಇದೀಗ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿದ್ದಾರೆ.

ಕೊಲೆಗಡುಕರು, ಅತ್ಯಾಚಾರಿಗಳನ್ನು ಕಂಡಲ್ಲಿ ಗುಂಡಿಕ್ಕಿ ಇನ್ಕೌಂಟರ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಯತ್ನಾಳ್ ಅವರು, ಬ್ಯಾಂಕ್‌ ದರೋಡೆಕೋರರು, ಅತ್ಯಾಚಾರಿಗಳು, ಕೊಲೆಗಡುಕರು ಸಿಕ್ಕರೆ ಯಾವುದೇ ಮುಲಾಜಿಲ್ಲದೇ ಎನೌಕೌಂಟರ್‌ ಮಾಡಿ ಪ್ರಕರಣ ಮುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಗದಗದಲ್ಲಿ ಸಮೀರ್, ಉಮರ್ ಹಾಗೂ ಜಾಕಿರ್ ಎಂಬುವವರು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ, ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಇದನ್ನೂ ಓದಿ: ಸುಹಾಸ್ ಹತ್ಯೆ; BJP ರಾಜಕೀಯಕ್ಕೆ ಬಳಸಿಕೊಳ್ಳಬಾರದು: ಡಿಕೆಶಿ

ಗೃಹ ಇಲಾಖೆ ಬದುಕಿದೆಯೋ, ಸತ್ತಿದೆಯೋ ಎಂದು ಜನರೇ ಹೇಳಬೇಕು. ಬ್ಯಾಂಕ್ ದರೋಡೆಕೋರರಿಗೆ, ಅತ್ಯಾಚಾರಿಗಳಿಗೆ, ಕೊಲೆಗಡುಕರು ಸಿಕ್ಕರೆ ಅವರಿಗೆ ಯಾವುದೇ ಮುಲಾಜು ತೋರದೆ ಅಲ್ಲೇ ಎನ್ಕೌಂಟರ್ ಮಾಡಿ ಪ್ರಕರಣವನ್ನು ಮುಗಿಸಬೇಕೇ ಹೊರತು ಅವರಿಗೆ ಯಾವುದೇ ಕನಿಕರ, ಕಾನೂನು ನೆರವು ನೀಡಬಾರದು ಎಂದಿದ್ದಾರೆ.

 

Related