ತಂಗಿಯನ್ನು ಚುಡಾಯಿಸಿದಕ್ಕೆ,ಯುವಕನನ್ನು ಕೊಲೆ ಮಾಡಿದ ಅಣ್ಣ..!!

  • In Crime
  • June 24, 2022
  • 59 Views
ತಂಗಿಯನ್ನು ಚುಡಾಯಿಸಿದಕ್ಕೆ,ಯುವಕನನ್ನು ಕೊಲೆ ಮಾಡಿದ ಅಣ್ಣ..!!

ಹುಬ್ಬಳ್ಳಿ: ತಂಗಿಯನ್ನು ಚುಡಾಯಿಸಿದಕ್ಕೆ ಸಹೋದರರು ಯುವಕನಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಚಂದ್ರಶೇಖರ್​ ಮೃತ ದುರ್ದೈವಿ.

ಮೃತ ಚಂದ್ರಶೇಖರ್​ ಆರೋಪಿಗಳಾದ ಕಿರಣ ಭಜಂತ್ರಿ ಹಾಗೂ ಅಭಿಷೇಕ್ ಭಜಂತ್ರಿಯ ಸಹೋದರಿಯನ್ನು ಪ್ರೀತಿಸುವಂತೆ ಪೀಡಿಸಿದ್ದು, ಆಗಾಗ ಚುಡಾಯಿಸುತ್ತಿದ್ದ ಎನ್ನಲಾಗಿದೆ.

ಇದೇ ವಿಚಾರಕ್ಕೆ ಕೋಪಗೊಂಡ ಆರೋಪಿಗಳು ಚಂದ್ರಶೇಖರ್​ಗೆ ಮನಬಂದಂತೆ ಚಾಕು ಇರಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡ ಯುವಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಚಂದ್ರಶೇಖರ್ ಇಂದು ಸಾವನ್ನಪ್ಪಿದ್ದಾನೆ.

ಘಟನೆ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ಮುಂದುವರಿಸಿದ್ದಾರೆ.

Related