ನ್ಯಾಯಕ್ಕಾಗಿ ಹೋರಾಟಕ್ಕಿಳಿದ ಮುರಾರ್ಜಿ ಶಾಲಾ ವಿದ್ಯಾರ್ಥಿಗಳು!

  • In State
  • December 4, 2024
  • 833 Views
ನ್ಯಾಯಕ್ಕಾಗಿ ಹೋರಾಟಕ್ಕಿಳಿದ ಮುರಾರ್ಜಿ ಶಾಲಾ ವಿದ್ಯಾರ್ಥಿಗಳು!

ಶಹಾಪುರ: ತಾಲೂಕಿನ ಬೇವಿನಹಳ್ಳಿ ಮೂರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳು ಶಾಲೆಯ ಪ್ರಾಂಶುಪಾಲರು ಮತ್ತು ನಿಲಯ ಪಾಲಕರ ವಿರುದ್ಧ ತಹಸೀಲ್ ಕಛೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರಾಂಶುಪಾಲ ಮತ್ತು ನಿಲಯಪಾಲಕರ ಪಿತೂರಿಯಿಂದ ಶಿಕ್ಷಕರ ಮೇಲೆ ವಿನಾಕಾರಣ ಸಮಾಜ ವಿಜ್ಞಾನ ಶಿಕ್ಷಕ ಶಿವರಾಜ್ ಬಿರನೂರ ಹಾಗೂ ಹಿಂದಿ ಶಿಕ್ಷಕ ಮುಬಾರಕ್ ಅವರನ್ನು ವಿನಾಕಾರಣ ಆರೋಪ ಮಾಡಿ ಅಮಾನತು ಮಾಡಿಸಿದ್ದಾರೆ. ಈ ಇಬ್ಬರ ಅಸಭ್ಯ ವರ್ತನೆ ಮತ್ತು ದುರಾಡಳಿತಕ್ಕೆ ಬೇಸತ್ತಿದ್ದು. ಬೇಜವಾಬ್ದಾರಿ ತನದಿಂದ ನಡೆದು ಕೊಳ್ಳುತ್ತಿರುವುದಲ್ಲದೇ ವಿದ್ಯಾರ್ಥಿಗಳ ಹಿತವನ್ನು ಮರೆತಿದ್ದಾರೆ. ಇದರಿಂದ ನಮ್ಮ ಶೈಕ್ಷಣೀಕ ಜೀವನ ಹಾಳಾಗುತ್ತಿದ್ದು ಕೂಡಲೇ ಪ್ರಾಂಶುಪಾಲರಾದ ನೀಲಮ್ಮ ಮತ್ತು ನಿಲಯಪಾಲಕ ರಾವುತಪ್ಪ ಅವರನ್ನು ಅಮಾನತುಗೊಳಿಸಬೇಕು ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು. ಕೂಡಲೇ ಸ್ಥಳಕ್ಕೆ ಡಿಡಿ ಚೆನ್ನಬಸಪ್ಪ ಮುದೋಳ ಬೇಟಿ ನೀಡಿ ವಿದ್ಯಾರ್ಥಿಗಳ ಮನವಿಯನ್ನು ಆಲಿಸಿ ಇಬ್ಬರನ್ನು ಅಮಾನತುಗೊಳಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು. ಈ ಸಂದರ್ಭದಲ್ಲಿ ತಹಸೀಲ್ದಾರ ಉಮಾಕಾಂತ ಹಳ್ಳೆ, ಪಿಐ ಎಸ್.ಎಂ ಪಾಟೀಲ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು.

ಸೂಕ್ತ ತನಿಖೆ ಆಗಲಿ

ಮಕ್ಕಳ ಹಕ್ಕನ್ನು ಕಸೆದುಕೊಳ್ಳುವ ಕೆಲಸ ನಡೆಯುತ್ತಿದ್ದು. ಶಾಲೆಯ ಎದುರು ಪ್ರತಿಭಟನೆ ಮಾಡುವ ಅವಕಾಶ ಇದ್ದರೂ ಸಹ ವಿದ್ಯಾರ್ಥಿಗಳು ನಗರಕ್ಕೆ ಬಂದು ಪ್ರತಿಭಟನೆ ಮಾಡಿದ್ದು. ಶಾಲೆಯಿಂದ ನಗರಕ್ಕೆ ಸುಮಾರು ೫ ಕಿ.ಮೀ ಅಂತರ ಇದ್ದು ಅಲ್ಲಿಂದ ಇಲ್ಲಿಯ ವರೆಗೆ ಕಾಲ್ನಡಿಗೆಯಲ್ಲಿ ಬಂದಿದ್ದು ಇನ್ನೂ ಕೇಲ ಮಕ್ಕಳು ಬಸ್ ಮೂಲಕ ನಗರಕ್ಕೆ ಬಂದಿದ್ದಾರೆ. ದಾರಿ ಮಧ್ಯೆ ಯಾವುದಾದರು ಅನಾಹುತ ಸಂಭವಿಸಿದರೆ ಇದಕ್ಕೆ ಯಾರು ಹೊಣೆ. ಆದ್ದರಿಂದ ತಪ್ಪು ಯಾರದ್ದೇ ಆದರೂ ಸಹ ತನಿಖೆ ಆಗಬೇಕು ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

ಈ ಹಿಂದೆ ಶಾಲೆಯಲ್ಲಿ ಹುಟ್ಟುಹಬ್ಬ ಆಚರಿಸಿದ ಹಿನ್ನಲೇ ಒರ್ವ ಶಿಕ್ಷಕರನ್ನು ಮೇಲಾಧಿಕಾರಿಗಳು ಅಮಾನತುಗೊಳಿಸಿದ್ದಾರೆ. ಆದರೆ ಇದಕ್ಕೆಲ್ಲಾ ನಾನೇ ಕಾರಣವೆಂದು ಬಿಂಬಿಸುವ ಕೆಲಸ ನಡೆಯುತ್ತಿದೆ. ವಿದ್ಯಾರ್ಥಿಗಳನ್ನು ಪ್ರಚೋಧಿಸಿ ಪ್ರತಿಭಟನೆ ಹುನ್ನಾರ ನಡೆಸುತ್ತಿದ್ದಾರೆ. ಈ ಬಗ್ಗೆ ಕೂಲಂಕುಶ ತನಿಖೆ ಆಗಲಿ ಎಂದು ಪ್ರಾಂಶುಪಾಲರಾದ ನೀಲಮ್ಮ ಅವರು ಹೇಳಿದರು.

Related