ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲು ಬರಲಿದ್ದಾರೆ ಮೋದಿ

ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲು ಬರಲಿದ್ದಾರೆ ಮೋದಿ

ದೆಹಲಿ: ವಿಶ್ವಕಪ್ ಫೈನಲ್ ಹೈ ವೋಲ್ಟೇಜ್ ಪಂದ್ಯ ನಾಳೆ (ನ.19 ಭಾನುವಾರ) ನಡೆಯಲಿದ್ದು ಪ್ರತಿಯೊಬ್ಬ ಭಾರತೀಯರ ಕಣ್ಣು ವಿಶ್ವಕಪ್ ನ ಮೇಲೆ ನೆಟ್ಟಿದೆ.

ಹೌದು ವಿಶ್ವಕಪ್ ಫೈನಲ್ ಪಂದ್ಯವು (ನ.19 ಭಾನುವಾರ) ಭಾರತ ಮತ್ತು ಆಸ್ಟ್ರೇಲಿಯ ವಿರುದ್ಧ ನಡೆಯಲಿದ್ದು ಆಟಗಾರರನ್ನು ಹುರಿದುಂಬಿಸಲೆಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಕಪ್ ಪಂದ್ಯ ಫೈನಲ್ ವೀಕ್ಷಣೆ ಮಾಡಲು ಬರಲಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ  ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯಕ್ಕೆ ಭಾರತದ ಪ್ರಧಾನಿ ಮತ್ತು ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ಉಪಸ್ಥಿತರಿರುತ್ತಾರೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಕಚೇರಿಯಿಂದ ಅಧಿಕೃತ ಪ್ರಕಟಣೆ ತಿಳಿಸಿದೆ.

ಗುಜರಾತ್ ಮುಖ್ಯಮಂತ್ರಿ ಶುಕ್ರವಾರ (ನವೆಂಬರ್ 17) ಅಹಮದಾಬಾದ್‌ನಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದು, ಭದ್ರತೆ, ಸಂಚಾರ ನಿರ್ವಹಣೆ, ಸ್ವಚ್ಛತೆ ಮತ್ತು ಹೆಚ್ಚಿನ ಅಂಶಗಳ ಸಮಗ್ರ ಪರಿಶೀಲನೆ ನಡೆಸಿದರು ಎಂದು ಅವರ ಕಚೇರಿಯ ಪ್ರಕಟಣೆ ತಿಳಿಸಿದೆ.

 

Related