ಮೋದಿನೆ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ: ಕೆಎಸ್ ಈಶ್ವರಪ್ಪ

ಮೋದಿನೆ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ: ಕೆಎಸ್ ಈಶ್ವರಪ್ಪ

ಶಿವಮೊಗ್ಗ: ಲೋಕಸಭಾ ಚುನಾವಣೆ 2024ನೇ ಸಾಲಿನ ಫಲಿತಾಂಶಕ್ಕೆ ಈಗಾಗಲೇ ಕ್ಷಣಗಳನ್ನು ಪ್ರಾರಂಭವಾಗಿದ್ದು, ಈ ಬಾರಿಯೂ ಕೂಡ ನರೇಂದ್ರ ಮೋದಿಯವರೇ ಮತ್ತೊಮ್ಮೆ ಮೂರನೇ ಬಾರಿ ಪ್ರಧಾನಿಯಾಗಲಿದ್ದಾರೆ ಎಂಬ ಮಾಹಿತಿಗಳು ಹೊರಬಿದ್ದಿದ್ದು,  ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಕೂಡ ಮತ್ತೊಮ್ಮೆ ನರೇಂದ್ರ ಮೋದಿಯವರೇ ಪ್ರಧಾನಿ ಯಾಗುತ್ತಾರೆ ಎಂದು  ಹೇಳಿದ್ದಾರೆ. ಇದನ್ನೂ ಓದಿ: ಡಿಕೆ ಶಿವಕುಮಾರ್ ಶತ್ರು ಭೈರವಿ ಯಾಗ ಕತೆ ಕಟ್ಟಿದ್ದಾರೆ: ಎಚ್ ಡಿಕೆ

ನಗರದಲ್ಲಿಂದು ಸುತ್ತಿಗಾರರೊಂದಿಗೆ ಮಾತನಾಡಿದ ಅವರು, ಸಮೀಕ್ಷೆಗಳು ಮತ್ತು ಜನರ ಭಾವನೆಗಳ ಮೇರೆಗೆ ನೂರಕ್ಕೆ ನೂರು ಈ ಬಾರಿಯೂ ಕೂಡ ನರೇಂದ್ರ ಮೋದಿಯವರೇ ಪ್ರಧಾನಮಂತ್ರಿ ಯಾಗುತ್ತಾರೆ ಇದರಲ್ಲಿ ಯಾವುದೇ ಅನುಮಾನವೆಲ್ಲವೆಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಹೇಳಿದ್ದಾರೆ.

ಕಾಂಗ್ರೆಸ್ನವರು ಸಮೀಕ್ಷೆ ನಮ್ಮೆಲ್ಲ. ನಾಳೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ಮಾತನ್ನು ಹೇಳುತ್ತಿದ್ದಾರೆ.

ಆದ್ರೆ ಕಾಂಗ್ರೆಸ್ ನವರಿಗೆ ಕೇವಲ ನಾಳೆವರೆಗೂ ಮಾತ್ರ ಈ ಮಾತನ್ನು ಹೇಳಲು ಅವಕಾಶವಿದೆ.  ನಾಳೆ ಮಧ್ಯಾಹ್ನದ ನಂತರ ಕಾಂಗ್ರೆಸ್ನವರಿಗೆ ಏನು ಮಾತನಾಡಬೇಕು ಎಂಬುದು ಅವರಿಗೆ ಗೊತ್ತಾಗದೆ ತಬ್ಬಿಬ್ಬರಾಗುತ್ತಾರೆ ಎಂದು ಹೇಳಿದ್ದಾರೆ

ಇಂಡಿಯಾ ಮೈತ್ರಿಕೂಟದವರು ನಾಳೆ ಮಧ್ಯಾಹ್ನದವರೆಗೆ ತಾವೇ ಅಧಿಕಾರಕ್ಕೆ ಬರೋದು ಅಂತ ಹೇಳುತ್ತಾರೆ, ಫಲಿತಾಂಶಗಳು ಹೊರಬಿದ್ದ ಮೇಲೆ ಈವಿಎಂಗಳ ಟ್ಯಾಂಪರಿಂಗ್ ನಡೆದಿದೆ, ನರೇಂದ್ರ ಮೋದಿಯವರು ಪುನಃ ಪ್ರಧಾನಮಂತ್ರಿಯಾಗುತ್ತಿರುವುದು ಆಕಸ್ಮಿಕ ಅನ್ನುತ್ತಾರೆ ಎಂದರು.

Related