Tech ಕಂಪನಿಗಳ ಸಿಇಒಗಳ ಜತೆ ಮೋದಿ ಸಭೆ

Tech ಕಂಪನಿಗಳ ಸಿಇಒಗಳ ಜತೆ ಮೋದಿ ಸಭೆ

ಕಳೆದ ಎರಡು ದಿನಗಳಿಂದ ಅಮೆರಿಕದ ಪ್ರವಾಸ ಅನ್ನು ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ನ್ಯೂಯಾರ್ಕ್​ನಲ್ಲಿ ಟೆಕ್ ಕಂಪನಿಗಳ ಸಿಇಓ ಜೊತೆ ಇಂದು (ಸೋಮವಾರ ಸೆಪ್ಟೆಂಬರ್‌ 23) ರಂದು ದುಂಡಮೇಜಿನ ಸಭೆ ನಡೆಸಿದ್ದಾರೆ.

ಇನ್ನು ಅಮೆರಿಕದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷಿಯ ಸಹಕಾರವನ್ನು ಹೆಚ್ಚಿಸು ಉಪಕರಣಗಳ ಕುರಿತು ನರೇಂದ್ರ ಮೋದಿ ಅವರು ಈ ದುಂಡುಮೇಜಿನ ಸಭೆಯಲ್ಲಿ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ತಜ್ಞರಿಗೆ ತಲೆನೋವಾದ ಸಿಲಿಕಾನ್ ಸಿಟಿಯಲ್ಲಿ ನಡೆದ ಮಹಾಲಕ್ಷ್ಮಿ ಕೊಲೆ ಪ್ರಕರಣ

ಇನ್ನು ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರು ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಸಂದೇಶಯನ್ನು ಹಂಚಿಕೊಂಡಿರುವ ಅವರು, ತಂತ್ರಜ್ಞಾನ, ನಾವೀನ್ಯತೆ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ಅಂಶಗಳನ್ನು ಚರ್ಚಿಸಲಾಗಿದೆ ಎಂದರು.

ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲು ಎಲ್ಲ ಪ್ರಯತ್ನಗಳನ್ನು ಮಾಡಲಿದ್ದೇವೆ ಎಂದು ಹೇಳಿದರು. ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಎಲ್ಲ ಪ್ರಯತ್ನಗಳನ್ನು ಮಾಡಲಿದೆ ಎಂದು ಪ್ರಧಾನಿ ಒತ್ತಿ ಹೇಳಿದರು.

 

Related