ಕುತೂಹಲ ಮೂಡಿಸಿದೆ ಬಿಜೆಪಿ ಹೈಕಮಾಂಡ್ : ಸಂತೋಷ್-ಮೋದಿ ಭೇಟಿ

ಕುತೂಹಲ ಮೂಡಿಸಿದೆ ಬಿಜೆಪಿ ಹೈಕಮಾಂಡ್ : ಸಂತೋಷ್-ಮೋದಿ ಭೇಟಿ

ಕಳೆದ ಎರಡು ತಿಂಗಳಿಂದ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯಾಗುತ್ತೆದೆಂಬ ಚರ್ಚೆ ಮುನ್ನೆಲೆಗೆ ಬಂದು ಮುಂದೂಡಿಕೆಯಾಗುತ್ತಲೇ ಇದೆ. ಈವರೆಗೂ ಬಿಜೆಪಿ ವರಿಷ್ಠರು ಸ್ಪಷ್ಟ ನಿರ್ದೇಶನ ನೀಡದೆ ರಾಜ್ಯ ಬಿಜೆಪಿ ನಾಯಕರಲ್ಲಿ ಗೊಂದಲ ಸೃಷ್ಠಿಸಿದ್ದಾರೆ.

ವಿಧಾನಸಭಾ ಚುನಾವಣೆಗೂ ಮುನ್ನ ಪಕ್ಷದ ಹೈಕಮಾಂಡ್ ಏನೆಲ್ಲಾ ಬದಲಾವಣೆಗಳನ್ನು ತರುತ್ತದೆ ಎಂಬುದರ ಬಗ್ಗೆ ಬಿಜೆಪಿ ನಾಯಕರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಇದೇ ವೇಳೆ ಗುಜರಾತ್ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ನವದೆಹಲಿ ತಲುಪಿದ್ದು್ಲ ಚುನಾವಣೆಗೆ ಮುಂದಾಗಿರುವ ರಾಜ್ಯದ ಪರಿಸ್ಥಿತಿಯ ಬಗ್ಗೆ ವಿವರಿಸಲು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.

ಕರ್ನಾಟಕದ ಸಮಸ್ಯೆ ಮತ್ತು ಬೊಮ್ಮಾಯಿ ಸರ್ಕಾರದ ಪರಿಣಾಮಕಾರಿ ನೀತಿಗಳು ಹಾಗೂ ಪಕ್ಷದ ಪರಿಸ್ಥಿತಿಯನ್ನು ಬಿ.ಎಲ್.ಸಂತೋಷ್ ಪ್ರಧಾನಿಯೊಂದಿಗೆ ಚರ್ಚಿಸಬಹುದು ಎನ್ನಲಾಗಿದೆ. ವಂಶ ರಾಜಕಾರಣವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಬಿಜೆಪಿ ನಾಯಕತ್ವ ಬದಲಾವಣೆಯ ಬಗ್ಗೆ ಸಂತೋಷ್ ಇತ್ತೀಚೆಗೆ ಮಾತನಾಡಿದ್ದು ಗಮನಾರ್ಹವಾಗಿದೆ.

Related