ಅಹಮದಾಬಾದ್: ಗುಜರಾತಿನ ಅಹ್ಮದಾಬಾದ್ ನಿನ್ನೆ ನಡೆದ ಭೀಕರ ವಿಮಾನ ದುರಂತದಲ್ಲಿ ಎಲ್ಲಾ ಪ್ರಯಾಣಕರು ಸತ್ತು ಹೋಗಿದ್ದಾರೆ ಎಂದು ತಿಳಿದುಕೊಂಡಿದ್ದರು. ಆದರೆ ಪವಾಡ ಪುರುಷನಂತೆ ಒಬ್ಬ ಬ್ರಿಟನ್ ದೇಶದ ಪ್ರಜೆಯೊಬ್ಬರು ರಮೇಶ್ ವಿಶ್ವಾಸ್ ಕುಮಾರ್ ಎನ್ನುವರು ಈ ದುರಂತದಿಂದ ಪಾರಾಗಿ ಬಂದಿದ್ದಾರೆ.
ಈ ದುರಂತದಲ್ಲಿ ರಮೇಶ್ ಅವರಿಗೆ ಕೈಯಿ, ಕಾಲು ಮತ್ತು ಕಣ್ಣಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನು ಪ್ರಧಾನಿ ನರೇಂದ್ರ ಮೋದಿಯವರು ವಿಮಾನ ದುರಂತದಲ್ಲಿ ಬದುಕುಳಿದಿರುವ ರಮೇಶ ಅವರನ್ನು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಅಲ್ಲದೆ ದುರಂತದ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರಮೇಶ್ ಬಳಿ ಘಟನೆ ಬಗ್ಗೆ ವಿವರಣೆ ಪಡೆದಿದ್ದಾರೆ. ಇದನ್ನೂ ಓದಿ: ವಿಮಾನ ಪಥನ ಸ್ಥಳಕ್ಕೆ ಮೋದಿ ಭೇಟಿ
ರಮೇಶ್ ತಾನು ಹೇಗೆ ಬಚಾವಾದೆ ಅಂತ ಪ್ರಧಾನಿ ಮೋದಿಯವರಿಗೆ ವಿವರಿಸಿದರು. ವಿಮಾನ ಅಪ್ಪಳಿಸುವ ವಿಷಯ ಗೊತ್ತಾಗುತ್ತಿದ್ದಂತೆ ರಮೇಶ್ ಎಮರ್ಜೆನ್ಸಿ ಎಕ್ಸಿಟ್ ಓಪನ್ ಮಾಡಿ ಕೆಳಗೆ ಧುಮುಕಿದರಂತೆ.
