ಎಂ.ಎಂ.ಕಲ್ಬುರ್ಗಿ ಸಮಗ್ರ ಸಂಪುಟ ಬಿಡುಗಡೆಗೆ ಸಿಎಂ ದಿನಾಂಕಕ್ಕೆ ಮನವಿ

ಎಂ.ಎಂ.ಕಲ್ಬುರ್ಗಿ ಸಮಗ್ರ ಸಂಪುಟ ಬಿಡುಗಡೆಗೆ ಸಿಎಂ ದಿನಾಂಕಕ್ಕೆ ಮನವಿ

ಬೆಂಗಳೂರು: ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮತ್ತು ಹಿರಿಯ ಸಾಹಿತಿ ಕೃಷ್ಣ ಕೊಲ್ಹಾರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ಮಂಗಳವಾರ ಜ 14 ರಂದು ಭೇಟಿಯಾಗಿ ಎಂ.ಎಂ.ಕಲ್ಬುರ್ಗಿ ಅವರ 42 ಸಮಗ್ರ ಸಂಪುಟಗಳ ಬಿಡುಗಡೆಗೆ ದಿನಾಂಕ  ನೀಡುವಂತೆ ಮನವಿ ಸಲ್ಲಿಸಿದರು.

‘ಕಾವೇರಿ’ ಯಲ್ಲಿ ಭೇಟಿಯಾದ ಅವರು ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದರು.ಕಲ್ಬುರ್ಗಿ ಅವರ ಸಾಹಿತ್ಯದ ಸಮಗ್ರ ಸಂಪುಟ ಕುರಿತು ಮುಖ್ಯಮಂತ್ರಿಯವರಿಗೆ ಅವರು ವಿವರಿಸಿದರು. ಇದನ್ನೂ ಓದಿ: ಪತ್ರಕರ್ತರ ಸಹಕಾರ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಿದ ಸಿಎಂ

ಸೂಕ್ತ ದಿನಾಂಕ ನೀಡುವ ಭರವಸೆ ನೀಡಿದರು. ಹಾಗೆಯೇ ದಾಸ ಸಾಹಿತ್ಯದ ಸಮಗ್ರ ಸಂಪುಟ ಕೂಡ ಸಿದ್ಧ ಆಗುತ್ತಿದ್ದು ಅದಕ್ಕೆ ಸರ್ಕಾರದಿಂದ ಬಿಡುಗಡೆ ಆಗಬೇಕಿದ್ದ ಹಣ ಕೊಡಿಸುವಂತೆಯೂ ಅವರು ಕೋರಿಕೆ ಸಲ್ಲಿಸಿದರು.

Related