ಅಭಿನಂದನ ಕಾರ್ಯಕ್ರಮದಲ್ಲಿ ಮಧ್ಯ ವಿತರಣೆ; ಕೆ ಸುಧಾಕರ್ ಹೇಳಿದ್ದೇನು: ಕೆ. ಸುಧಾಕರ್

ಅಭಿನಂದನ ಕಾರ್ಯಕ್ರಮದಲ್ಲಿ ಮಧ್ಯ ವಿತರಣೆ; ಕೆ ಸುಧಾಕರ್ ಹೇಳಿದ್ದೇನು: ಕೆ. ಸುಧಾಕರ್

ಕೋಲಾರ: ಲೋಕಸಭಾ ಚುನಾವಣೆಯಲ್ಲಿ ಬಹುಮತಗಳಿಂದ ಸಂಸದರಾಗಿ ಆಯ್ಕೆಯಾಗಿರುವ ಡಾ. ಕೆ ಸುಧಾಕರ್ ಅವರು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರಿಗೆ ಕೃತಜ್ಞತಾ ಕಾರ್ಯಕ್ರಮವನ್ನು ಭಾನುವಾರ ನೆಲಮಂಗಲದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಾರ್ಯಕರ್ತರಿಗೆ ಉಚಿತ ಮಾಂಸಹಾರ ಊಟ, ಸಾರಾಯಿ, ಮಧ್ಯ ವಿತರಣೆ ಮಾಡಲಾಯಿತು.

ಇನ್ನು ಕೃತಜ್ಞತಾ ಸಮಾರಂಭದಲ್ಲಿ ಸಾರಾಯಿ ಮತ್ತು ಮಧ್ಯ ವಿತರಣೆ ಮಾಡಿರುವುದರಿಂದ ಡಾ. ಕೆ ಸುಧಾಕರ್ ಅವರ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಇದರ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಕೆ ಸುಧಾಕರ್ ಅವರು ಅಭಿನಂದನಾ ಸಮಾರಂಭವನ್ನು ನಾನು ಆಯೋಜಿಸಿಲ್ಲ, ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣದಲ್ಲಿ ಸಚಿವ, ಶಾಸಕರ ಪಾತ್ರವಿಲ್ಲ: ಡಿಸಿಎಂ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕವಾಗಿ ಮದ್ಯ ಹಂಚುವುದು ಅಪರಾಧವಾಗಿದ್ದು, ಅಕ್ಷಮ್ಯವಾಗಿದೆ. ನನ್ನ 20 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಎಂದಿಗೂ ಮದ್ಯ ವಿತರಿಸಿಲ್ಲ. ನಾನು ಸನ್ಮಾನ ಕಾರ್ಯಕ್ರಮ ಆಯೋಜಿಸಿಲ್ಲ ಎಂದಿದ್ದಾರೆ.

ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಆಹ್ವಾನದ ಮೇರೆಗೆ ಪ್ರತಿಪಕ್ಷದ ನಾಯಕ ಆರ್.ಅಶೋಕ ಮತ್ತು ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆಲ ಸಮಯದ ನಂತರ ವಾಪಸಾದೆವು. ಆ ನಂತರ ಬೆಳವಣಿಗೆಗಳು ನಡೆದಿವೆ ಎಂದರು.

Related