ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ ಸೀರಿಯಲ್ ಕೂಡ ಒಂದು ಅತ್ಯದ್ಭುತ ಸೀರಿಯಲ್ ಆಗಿದ್ದು ಈ ಸೀರಿಯಲ್ ನಲ್ಲಿ ಮೇಘಾ ಶೆಟ್ಟಿಯವರು ಅನು ಸಿರಿಮನೆ ಪಾತ್ರವಹಿಸಿ ಇಡೀ ಕರ್ನಾಟಕದ ಮನೆ ಮಂದಿಯ ಮನ ಗೆದ್ದಿದ್ದರು.
ಸೀರಿಯಲ್ ಮಾತ್ರವಲ್ಲದೆ ಮೇಘಾ ಶೆಟ್ಟಿ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿ ಸಹಿ ಎನಿಸಿಕೊಂಡಿರುವ ಅವರು ಸದ್ಯ ಧಾರಾವಾಹಿ ನಿರ್ಮಾಣಗಳಲ್ಲಿ ಸಖತ್ ಬಿಜಿಯಾಗಿರುವ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ.
ಇನ್ನು ಆಗಾಗ ಫೋಟೋ ಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳ ಕಣ್ಣು ತಂಪು ಮಾಡುವುದರ ಜೊತೆಗೆ ಅಭಿಮಾನಿಗಳ ಜೊತೆಗೆ ಸಖತ್ ಕನೆಕ್ಟಿವ್ ಆಗಿದ್ದಾರೆ. ಇದನ್ನೂ ಓದಿ: ನಟ ನೆನಪಿರಲಿ ಪ್ರೇಮ್ಗೆ ಬಿಗ್ ಶಾಕ್..!
ಅದರಂತೆ ಮತ್ತೆ ಇದೀಗ ಬ್ಲಾಕ್ ಡ್ರೆಸ್ ನಲ್ಲಿ ಫೋಟೋಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹರಿಬಿಟ್ಟಿರುವ ಮೇಘಾ ಶೆಟ್ಟಿ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಕಪ್ಪು ಡ್ರೆಸಲ್ಲಿ ದಂತದ ಗೊಂಬೆಯಂತಿರುವ ಮೇಘಾ ಶೆಟ್ಟಿ ಅಂದ ಎದ್ದು ಕಾಣುತ್ತಿದ್ದು, ಇದನ್ನು ನೋಡಿ, ಹುಡುಗರು ಕವಿಗಳಾಗಿ ಹಾಡಿ ಹೊಗಳುತ್ತಿದ್ದಾರೆ.
ಮೇಘಾ ಶೆಟ್ಟಿ ತುಂಬಾನೆ ಸುಂದರವಾಗಿ ಕಾಣಿಸ್ತಿದ್ದೀರಿ, ನೀವು ದೇವತೆ, ಕ್ಲಾಸ್ 1 ಫೋಟೊಗ್ರಾಫಿ, ನಿಮ್ಮ ಸುಂದರ ಹೇರ್ ಸ್ಟೈಲ್, ಕೊಲ್ಲುವಂತಹ ಕಣ್ಣುಗಳು, ನಿಮ್ಮ ಮಿಲ್ಕಿ ಬ್ಯೂಟಿ ಎಲ್ಲವೂ ಸೇರಿ ನಮ್ಮನ್ನು ಸೆಳೆಯುತ್ತಿದೆ ಎನ್ನುತ್ತಿದ್ದಾರೆ ಜನ.