ಮಂಡ್ಯ ಜಿಲ್ಲಾ ಕ್ರೀಡಾಂಗಣ : ವಾರದೊಳಗೆ ಟೆಂಡರ್

ಮಂಡ್ಯ ಜಿಲ್ಲಾ ಕ್ರೀಡಾಂಗಣ : ವಾರದೊಳಗೆ ಟೆಂಡರ್

ಬೆಂಗಳೂರು : ಮಂಡ್ಯ ಜಿಲ್ಲಾ ಕ್ರೀಡಾಪಟುಗಳ ಸಾಧನೆಗೆ ಕ್ರೀಡಾಂಗಣ ಸಿದ್ದವಾಗುತ್ತಿದೆ. ರಾಜ್ಯ ಸರ್ಕಾರ ಬಜೆಟ್‍ನಲ್ಲಿ ಕ್ರೀಡಾಂಗಣವನ್ನು ಹೈಟೆಕ್ ಮಾಡುವುದಾಗಿ ಘೋಷಣೆ ಮಾಡಿತ್ತು. 10 ಕೋಟಿ ರೂ. ವೆಚ್ಚದಲ್ಲಿ ಸಕಲ ಸೌಲಭ್ಯಗಳ ಜೊತೆ ಕ್ರೀಡಾಂಗಣ ಆಗುತ್ತಿದೆ. ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ವಾರದೊಳಗೆ ಟೆಂಡರ್ ಆಹ್ವಾನಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ  ಗುರುವಾರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಖೇಲೋ ಇಂಡಿಯಾ ಸೆಂಟರ್, ಕ್ರೀಡಾ ವಿಜ್ಞಾನ ಕೇಂದ್ರ, ಕ್ರೀಡಾ ವಸತಿ ಶಾಲೆ, ಬಾಲಕಿಯರ ಕ್ರೀಡಾ ವಸತಿ ನಿಲಯ ಮಂಜೂರಾಗಿದೆ. ಜಿಮ್ ನಿರ್ಮಾಣಕ್ಕೆ ರೂ. 23 ಲಕ್ಷ ಮಂಜೂರಾಗಿದೆ. ಮಂಡ್ಯದಲ್ಲಿ ವಿಶಾಲವಾದ ಜಿಲ್ಲಾ ಕ್ರೀಡಾಂಗಣವಿದ್ದರೂ ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯವಿಲ್ಲದೆ ಕ್ರೀಡಾಪಟುಗಳು ಕೊರಗುವಂತಹ ಸ್ಥಿತಿ ಇದೆ ಎಂದು ಹೇಳಿದ್ದರು.

Related