ಜನರ ಆಶೀರ್ವಾದದಿಂದಲೇ ಸತತ 3 ಭಾರಿ ಶಾಸಕನಾಗಿದ್ದೇನೆ: ಎಂ. ಸತೀಶ್ ರೆಡ್ಡಿ

ಜನರ ಆಶೀರ್ವಾದದಿಂದಲೇ ಸತತ 3 ಭಾರಿ ಶಾಸಕನಾಗಿದ್ದೇನೆ: ಎಂ. ಸತೀಶ್ ರೆಡ್ಡಿ

ಬೊಮ್ಮನಹಳ್ಳಿ: ಜನರ ಆಶೀರ್ವಾದದಿಂದಲೇ ಸತತ ಮೂರು ಭಾರಿ ಶಾಸಕನಾಗಿದ್ದೇನೆ. ನನ್ನ ಜೀವ ಇರೋವರೆಗೂ ನಿಮ್ಮ ಋಣ ತೀರಿಸಲಾರೆ ಎಂದು ಸರ್ಕಾರದ ಮುಖ್ಯ ಸಚೇತಕ ಹಾಗೂ ಶಾಸಕ ಎಂ. ಸತೀಶ್ ರೆಡ್ಡಿ ಭಾವುಕರಾದರು.

ತಮ್ಮ50ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಹೊಂಗಸಂದ್ರದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಕರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಒಬ್ಬ ಸಾಮಾನ್ಯ ರೈತನ ಮಗನಾದ ನನಗೆ ಇಷ್ಟೊಂದು ಜನರ ಪ್ರೀತಿ, ಆಶೀರ್ವಾದ ನೀಡಿರುವುದು ಪೂರ್ವಜನ್ಮದ ಸುಕೃತ.  900 ಕೋಟಿಗೂ ಹೆಚ್ಚು ಅನುದಾನದೊಂದಿಗೆ ಹಲವಾರು ಅಭಿವೃದ್ದಿ ಕರ್ಯಕ್ರಮಗಳನ್ನು ಮಾಡಿದ್ದೇನೆ. ಕ್ಷೇತ್ರದ ಎಲ್ಲಾ ವಿಭಾಗದಲ್ಲಿ ಅಗತ್ಯವಿರುವ ಅಭಿವೃದ್ದಿ ಕರ್ಯಗಳನ್ನು ಕೈಗೊಂಡಿದ್ದೇನೆ. ನಿಮ್ಮ ಆಶೀರ್ವಾದದಿಂದ ಮುಂದಿನ ದಿನಗಳಲ್ಲಿ ಉಳಿಕೆ ಕಾಮಗಾರಿಗಳನ್ನು ಪೂರೈಸುತ್ತೇನೆಂದು ನುಡಿದರು.

ಹೊಂಗಸಂದ್ರದಲ್ಲಿ ನಿರ್ಮಿಸಿರುವ ಆಂಜನೇಯಸ್ವಾಮಿ ದೇವಸ್ಥಾನದ ಗೋಪುರದ ಕಳಸ ಪ್ರತಿಷ್ಠಾಪನೆ ಅಂಗವಾಗಿ ಶಾಸಕರೇ ಸ್ವತಃ ತಲೆ ಮೇಲೆ ಹೊತ್ತು ವಿಧಿ ವಿದಾನಗಳನ್ನು ಅನುಸರಿಸಿ ವಿಶೇಷ ಪೂಜೆ ಸಲ್ಲಿಸಿ ಸಾವಿರಾರು ಮಹಿಳೆಯರು ಹಾಗೂ ಭಕ್ತರ  ಸಮೂಹದೊಂದಿಗೆ ಪೂಜಾ ನೆರವೇರಿಸಿದರು. ಶ್ರೀ ಬಸವೇಶ್ವರ ಸಮಿತಿ ವತಿಯಿಂದ ಏರ್ಪಡಿಸದ್ದ ಆರೋಗ್ಯ ತಪಾಸಣೆಯಲ್ಲಿ ಭಾಗವಹಿಸಿ, ಬಂದಿರುವಂತಹ ರೋಗಿಗಳಿಗೆ ಉಚಿತ ಔಷದೋಪಚಾರಗಳನ್ನು ವಿತರಿಸಿದರು.

ಎಚ್.ಎಸ್.ಆರ್. ಬಡಾವಣೆಯಲ್ಲಿರುವ ಸಮರ್ಥನಂ ಟ್ರಸ್ಟ್ನಲ್ಲಿರುವ ಅಂಧ ಮಕ್ಕಳೊಂದಿಗೆ ಕೇಕ್ ಕತ್ತರಿಸಿ, ಮಕ್ಕಳಿಗೆ ಸಿಹಿ ರಸದೌತಣವನ್ನೇರ್ಪಡಿಸಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಎಚ್.ಎಸ್.ಆರ್. ಬ್ರಾಹ್ಮಣ ಸಂಘದ ವತಿಯಿಂದ ಏರ್ಪಡಿಸಿದ್ದ ಲಲಿತಾ ಸಹಸ್ರನಾಮ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ವೇದ ಪಂಡಿತರ ಆಶೀರ್ವಾದವನ್ನು ಪಡೆದರು. ಸಿಂಗಸಂದ್ರದಲ್ಲಿ ಮಹಿಳೆಯರಿಗೆ ಬಾಗಿನ ನೀಡಿ ಆಶೀರ್ವಾದ ಪಡೆದರು. ಜರಗನಹಳ್ಳಿಯಲ್ಲಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ಹಾಗೂ ಬ್ಯಾಗ್ ವಿತರಿಸಿದರು.

ಬಿಬಿಎಂಪಿ ಬೊಮ್ಮನಹಳ್ಳಿ ವಲಯ ಕಲ್ಯಾಣ ಇಲಾಖೆ ವತಿಯಿಂದ ಅಂಗವಿಕಲರಿಗೆ ತ್ರಿಚಕ್ರ ವಾಹನ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಶುಲ್ಕ ಮರುಪಾವತಿ ಚೆಕ್ ವಿತರಣೆ, ಆಟೋ-ಕಾರ್‌ಗಳ ವಿತರಣೆ, ಮನೆ ನಿರ್ಮಿಸಲು 5 ಲಕ್ಷ ಅನುದಾನ ಪತ್ರ, ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಣೆ ಹೀಗೆ  ಹಲವಾರು ಕರ್ಯಗಳಲ್ಲಿ ಭಾಗವಹಿಸುವ ಮೂಲಕ ಜನರೊಂದಿಗೆ ತಮ್ಮ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡರು.

ಕರ್ಯಕ್ರಮದಲ್ಲಿ ಮಾಜಿ ಪಾಲಿಕೆ ಸದಸ್ಯರುಗಳಾದ ಗುರುಮೂರ್ತಿ ರೆಡ್ಡಿ, ಭಾಗ್ಯಲಕ್ಷ್ಮಿ ಮುರಳಿ, ಶೋಭಾ ಮುನಿರಾಂ, ಭಾರತಿ ರಾಮಚಂದ್ರ, ಶಾಂತಾ ಬಾಬು, ಶ್ರೀನಿವಾಸ ರೆಡ್ಡಿ (ಕೇಬಲ್), ಬಿ.ಎಸ್. ಮಂಜುನಾಥ ರೆಡ್ಡಿ, ಬಿಜೆಪಿ ಮುಖಂಡರುಗಳಾದ ಹೊಂಗಸಂದ್ರ ಶ್ರೀನಿವಾಸ ರೆಡ್ಡಿ, ಆನಂದ ರೆಡ್ಡಿ, ಎ.ಎಂ.ನರಸಿಂಹಮೂರ್ತಿ, ಸೋಮಸಂದ್ರಪಾಳ್ಯ ಶ್ರೀನಿವಾಸ ರೆಡ್ಡಿ, ಅರಕೆರೆ ಬಿಜೆಪಿ ವಾರ್ಡ್ ಅಧ್ಯಕ್ಷ ಮಂಜುನಾಥ್, ಹೊಂಗಸಂದ್ರ ಅಧ್ಯಕ್ಷ ಬಾಬುರೆಡ್ಡಿ, ಎಸ್.ಸಿ. ಮೋರ್ಚಾ ಅಧ್ಯಕ್ಷ ವೆಂಕಟಾಚಲಪತಿ, ಯುವ ಮೋರ್ಚಾ ಅಧ್ಯಕ್ಷ ಲಕ್ಷö್ಮಣ ರೆಡ್ಡಿ ಹಲವಾರು ಬಿಜೆಪಿ ಕರ‍್ಯಕರ್ತರು, ಮುಖಂಡರುಗಳು ಭಾಗವಹಿಸಿದ್ದರು.

Related