ಲಾರಿ-ಬುಲೆರೊ ಡಿಕ್ಕಿ, ವ್ಯಕ್ತಿ ಸಾವು

  • In Crime
  • July 20, 2022
  • 315 Views
ಲಾರಿ-ಬುಲೆರೊ ಡಿಕ್ಕಿ, ವ್ಯಕ್ತಿ ಸಾವು

ತುಮಕೂರು, ಜು ೨೦ : ರಸ್ತೆಯ ಪಕ್ಕ ನಿಂತಿದ್ದ ಲಾರಿಗೆ ಬುಲೆರೊ ವಾಹನ ಡಿಕ್ಕಿ ಹೊಡೆದ ಪರಿಣಾಮ ಬುಲೆರೊದಲ್ಲಿದ್ದ ಜೋಸೆಫ್ (೩೨) ಎಂಬುವವರು ಮೃತಪಟ್ಟ ಘಟನೆ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಬಳಿಯ ಕಾಮತ್ ಹೋಟೆಲ್ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ.

ತಮಿಳುನಾಡು ನೋಂದಣಿಯ ಬುಲೆರೊ ಶಿರಾ ಕಡೆಯಿಂದ ತುಮಕೂರಿಗೆ ತೆರಳುವಾಗ ಅಪಘಾತ ಸಂಭವಿಸಿದೆ. ಬುಲೆರೊ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

 

Related