ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ನೆಲೆಸಲಿ

ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ನೆಲೆಸಲಿ

ಗಜೇಂದ್ರಗಡ : ಸಂವಿಧಾನ ಜಾರಿಗೆ ಬಂದು 72 ವರ್ಷವಾಯಿತು. ಆದರೆ, ಅದರ ಮಹತ್ವ ಈಗೀಗ ನಮಗೆ ಅರಿವಿಗೆ ಬರುತ್ತಿದೆ. ಜಾತಿಪದ್ಧತಿಗಳ ರಾಜಕೀಯ ನಿರ್ಮೂಲನಗೊಂಡು ದೇಶದಲ್ಲಿ ಸಮಾನತೆ, ಸೌಹಾರ್ದತೆ ಇರಲಿ. ನಮ್ಮ ದೇಶ ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಲಿ ಎಂದು ಅಂಜುಮಾನ್ ಇಸ್ಲಾಂ ಕಮೀಟಿ ಅಧ್ಯಕ್ಷ ಎ.ಡಿ ಕೋಲಕಾರ ಹೇಳಿದರು.

ನಗರದ ಮೌಲನ ಅಜಾದ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ 72ನೇ ಗಣರಾಜ್ಯೋತ್ಸದ ಧ್ವಜಾರೋಹಣ ನೇರೆವೇರಿಸಿ ಮಾತನಾಡಿದರು.
ದೇಶದಲ್ಲಿ ಸಂವಿಧಾನ ಎಷ್ಟರ ಮಟ್ಟಿಗೆ ಜಾರಿಯಾಗಿದೆ, ಸಂವಿಧಾನದ ಆಶಯದ ಅನ್ವಯವೇ ದೇಶದ ಪ್ರಗತಿ ಆಗುತ್ತಿದೆಯಾ? ಇಲ್ಲವಾ? ಎಂಬುದರ ಅವಲೋಕನ ಆಗಬೇಕು.

ಪತ್ರಕರ್ತ ದಾವಲಸಾಬ ತಾಳಿಕೋಟಿ ಮಾತನಾಡಿ, ಸಂವಿಧಾನದ  ಸಮಸಮಾಜದ ನಿರ್ಮಾಣ. ರಾಜಕೀಯ ಸ್ವಾತಂತ್ರ‍್ಯಕ್ಕಿಂತಲೂ  ಭಿನ್ನವಾಗಿ ಸಾಮಾಜಿಕ, ಆರ್ಥಿಕ  ಪ್ರಜಾಪ್ರಭುತ್ವ  ಸಂವಿಧಾನದ  ಆಶಯಗಳಾಗಿವೆ  ಆದರೆ  ಆರ್ಥಿಕವಾಗಿ ಸಂಪನ್ಮೂಲಗಳು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಿಲ್ಲ. ದೇಶದ ಪ್ರಜೆಗಳಿಗೆ ಧರ್ಮಾತೀತ, ಜಾತ್ಯತೀತವಾಗಿ ಅಭಿವೃದ್ಧಿ ಆಶಯಗಳಲ್ಲಿ ಸಕಾರಾತ್ಮವಾಗಿ ಒಳಗೊಳ್ಳುವಲ್ಲಿ ಶ್ರಮಿಸಿದಲ್ಲಿ ಮಾತ್ರ ಗಣರಾಜ್ಯೋತ್ಸವದ ಆಶಯ ಈಡೇರುತ್ತದೆ ಎಂದರು.

ಗಣರಾಜ್ಯೋತ್ಸವ ಹಾಗೂ ಸಂವಿಧಾನದ ಮಹತ್ವ ಎಷ್ಟೋ ಜನರಿಗೆ ಗೊತ್ತಿಲ್ಲ. ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ನೆನೆಯಬೇಕು. ಗಣರಾಜ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ, ಬಲಿದಾನಗಳನ್ನು ಇಂದಿನ ಯುವ ಸಮುದಾಯ ಅರ್ಥ ಮಾಡಿಕೊಂಡು ಪ್ರತಿಯೊಬ್ಬರೂ ಸಂವಿಧಾನ ಓದಬೇಕು ಎಂದರು.

ಈ ಸಂದರ್ಭದಲ್ಲಿ ಷಣ್ಮುಖ ಕರಮುಡಿ, ಬಿ.ಎಂ.ಕಮಾಟ್ರ, ಟಿ.ಕೆ ಕೋಸಗಿ, ಉಮಾ.ಎಸ್ ಬೆಣಕನವರಿ, ಹೀನಾಕೌಸರ್ ಮಕಾನದಾರ, ಚಾಂದಬಿ ವಣಗೇರಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related