ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಯಾಗಿ ಕೇವಲ ಎರಡೇ ವಾರಗಳಲ್ಲಿ ಬಿಗ್ ಬಾಸ್ ಮನೆಯಿಂದ ಆಚೆ ಬಂದಿರುವ ಲಾಯರ್ ಜಗದೀಶ್ ಅವರಿಗೆ ಎಲ್ಲಿಲ್ಲದ ಅಭಿಮಾನಿಗಳ ಬಳಗ ಹುಟ್ಟಿಕೊಂಡಿದೆ.
ಲಾಯರ್ ಜಗದೀಶ್ ಅವರು ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿದ್ದು ಹೆಚ್ಚು ಅಭಿಮಾನಿಗಳನ್ನು ಗಳಿಸಿದ ಅವರಿಗೆ ಬಿಗ್ ಬಾಸ್ ಹೋದಮೇಲೆ ಮತ್ತಷ್ಟು ಅಭಿಮಾನಿಗಳು ಹೊಟ್ಟಿಕೊಂಡಿದ್ದಾರೆ.
ಇನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಲಾಯರ್ ಜಗದೀಶ್ ಅವರು ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮತ್ತೆ ಇದೀಗ ಲಾಯರ್ ಜಗದೀಶ್ ಅವರು ಖಾಸಗಿ ವಾಹಿನಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋಗೆ ಕಾಲಿಟ್ಟಿದ್ದಾರೆ.
ಜಗದೀಶ್ ಅವರು ಎಂದಿನಂತೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಜೊತೆಗೆ ಬೇರೆ ಬೇರೆ ರಿಯಾಲಿಟಿ ಶೋನಿಂದಲೂ ಅವರಿಗೆ ಅಹ್ವಾನ ಬರುತ್ತಿದೆ. ಈಗ ಅವರು ‘ಜೀ ಕನ್ನಡ’ದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮಕ್ಕೆ ಬಂದಿದ್ದಾರೆ.
ಹೌದು, ಜಗಮಗಿಸುವ ವೇದಿಕೆಯಲ್ಲಿ ಕಲರ್ಫುಲ್ ಬಟ್ಟೆ ಧರಿಸಿ ಜಗದೀಶ್ ಅವರು ಎಂಟ್ರಿ ನೀಡಿದ್ದಾರೆ. ಜೊತೆಗೆ ಭರ್ಜರಿಯಾಗಿ ಡ್ಯಾನ್ಸ್ ಕೂಡ ಮಾಡಿದ್ದಾರೆ. ಅವರ ಎಂಟ್ರಿ ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ಜಡ್ಜ್ಗಳಾದ ರಕ್ಷಿತಾ ಪ್ರೇಮ್, ಶಿವರಾಜ್ಕುಮಾರ್, ವಿಜಯ್ ರಾಘವೇಂದ್ರ ಅವರು ಗ್ರ್ಯಾಂಡ್ ವೆಲ್ಕಮ್ ನೀಡಿದ್ದಾರೆ. ಎಂದಿನಂತೆ ಜಗದೀಶ್ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿಯ ಮನೆ ಮೇಲೆ ದಾಳಿಗೆ ಯತ್ನ!
ಇನ್ನು ಜೀ ಕನ್ನಡ ವಾಹಿನಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಪ್ರೋಮೋ ಹಂಚಿಕೊಳ್ಳಲಾಗಿದೆ. ಈ ವೀಕೆಂಡ್ನಲ್ಲಿ ಜಗದೀಶ್ ಅವರ ಈ ಸಂಚಿಕೆ ಪ್ರಕಾರ ಆಗಲಿದೆ.
ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಘರ್ಜಿಸಿದ ಲಾಯರ್ ಇದೀಗ ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಲು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ಕಾಲಿಟ್ಟಿದ್ದಾರೆ ಇದರಿಂದ ಲಾಯರ್ ಜಗದೀಶ್ ಅವರ ಅಭಿಮಾನಿಗಳ ಬಳಗ ಇನ್ನಷ್ಟು ಹೆಚ್ಚು ಆಗುವುದರಲ್ಲಿ ಅನುಮಾನವೇ ಇಲ್ಲ.