ಬೆಂಗಳೂರಿನಲ್ಲಿ ಡಿವೈಯು ಹೆಲ್ತ್ಕೇರ್ ಆರಂಭ

ಬೆಂಗಳೂರಿನಲ್ಲಿ ಡಿವೈಯು ಹೆಲ್ತ್ಕೇರ್ ಆರಂಭ

ಬೆಂಗಳೂರು: ಮಹಿಳೆಯರಿಗೆ ಅತ್ಯಂತ ಉನ್ನತವಾದ ವೈದ್ಯಕೀಯ ಮತ್ತು ಸೌಂದರ್ಯ ವರ್ಧಕ ಪರಿಹಾರಗಳನ್ನು ಸಾದರಪಡಿಸುವ ಡಿವೈಯು ಹೆಲ್ತ್ಕೇರ್ ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆಯಲ್ಲಿ ಇಂದು ತನ್ನ ಮೊದಲ ಕೇಂದ್ರವನ್ನು ಆರಂಭಿಸಿದೆ. ಮಹಿಳೆಯರು ಮತ್ತು ಮಕ್ಕಳ ಆರೈಕೆ ಕೇಂದ್ರವಾದ ಡಿವೈಯು ಶೈಶವಾವಸ್ಥೆಯಿಂದ ಹಿಡಿದು ಪ್ರೌಢಾವಸ್ಥೆಯಿಂದ ಋತುಬಂಧದವರೆಗೆ ಮಹಿಳೆಯ ಸಂಪೂರ್ಣ ಜೀವನಾವಧಿಯ ಸರ್ವ ಆರೋಗ್ಯ ಅಗತ್ಯಗಳಿಗೆ ಒಂದೇ ಸೂರಿನಡಿ ಪರಿಹಾರ ನೀಡುವ ತಾಣವಾಗಿರುತ್ತದೆ.

ಈ ಕೇಂದ್ರವನ್ನು ಸ್ಯಾಂಡಲ್‌ವುಡ್ ಉದ್ಯಮದ ಶೋಮ್ಯಾನ್, ಹಿರಿಯ ನಟ/ನಿರ್ದೇಶಕ ವಿ. ರವಿಚಂದ್ರನ್ ಮತ್ತು ಸೂಪರ್‌ಸ್ಟಾರ್ ಪ್ರಿಯಾಂಕಾ ಉಪೇಂದ್ರ ಅವರು ಉದ್ಘಾಟಿಸಿದರು. ಐಷಾರಾಮಿ ಆದರೂ ಕೈಗೆಟುಕುವ ಆರೋಗ್ಯ ಸೇವಾ ಕೇಂದ್ರವಾಗಿರುವ ಡಿವೈಯು ವಿಶ್ವಮಟ್ಟದ, ಯುಎಸ್‌ಎಫ್‌ಬಿಎ ಮಾನ್ಯತೆ ಪಡೆದಿರುವ ವೈದ್ಯಕೀಯ ಸೇವೆಗಳನ್ನು ಸಾದರಪಡಿಸುತ್ತವೆ. ಇವು ಆಧುನಿಕ ಮಹಿಳೆಯ ಅಗತ್ಯಗಳಿಗೆ ನೆರವಾಗುತ್ತವೆ. ಡಾ. ಜ್ಯೋತಿ ಬಂಡಿ ಮತ್ತು ಡಾ. ಪ್ರಶಾಂತ್ ಗೌಡ ಅವರು ಉದ್ಯಮದಲ್ಲಿ ೩೦ ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದು, ಈ ಕೇಂದ್ರವನ್ನು ಸ್ಥಾಪಿಸಿರುತ್ತಾರೆ. ಪಿಸಿಒಡಿ, ಸಂತಾನಹೀನತೆ, ತೂಕನಿರ್ವಹಣೆ, ಶಿಶು ಆರೈಕೆ, ಗರ್ಭಾವಸ್ಥೆಯ ನಂತರದ ಆರೈಕೆ ಅಲ್ಲದೆ, ವೆಜಿನೊಪ್ಲಾಸ್ಟಿ, ಮಮ್ಮಿ ಮೇಕ್‌ಒವರ್ ಮುಂತಾದ ಸೌಂದರ್ಯವರ್ಧಕ ಚಿಕಿತ್ಸೆಗಳಿಗೆ ಇತ್ತೀಚಿನ ವೈದ್ಯಕೀಯ ಪರಿಹಾರಗಳನ್ನು ಡಿವೈಯು ಹೆಲ್ತ್ಕೇರ್ ಪೂರೈಸುತ್ತದೆ. ಜಗತ್ತಿನಲ್ಲಿ ಅತ್ಯಂತ ಮುಂದುವರಿದ ಸ್ಮಾರ್ಟ್ ಐವಿಎಫ್ ತಂತ್ರಜ್ಞಾನವನ್ನು ಡಿವೈಯು ಭಾರತಕ್ಕೆ ತಂದಿದೆ. ಇದು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ, ಅತ್ಯಂತ ಉನ್ನತ ಗರ್ಭಧಾರಣೆ ಯಶಸ್ಸಿನ ದರದ ಖಾತ್ರಿ ನೀಡುತ್ತದೆ. ಇದು ಒತ್ತಡರಹಿತ ನಿಖರವಾದ ಮತ್ತು ಡಿಜಿಟಲೈಸ್ ಆದ ವಿಧಾನವಾಗಿರುತ್ತದೆ.

ಈ ಆರಂಭ ಕುರಿತು ಡಿವೈಯು ಹೆಲ್ತ್ಕೇರ್‌ನ ಸ್ಥಾಪಕರಾದ ಡಾ. ಜ್ಯೋತಿ ಬಂಡಿ ಅವರು ಮಾತನಾಡಿ, “ಮಹಿಳೆಯರು ವಿವಿಧ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಬಹುದು. ಅವರಲ್ಲಿ ಸರಿಯಾದ ಮಾಹಿತಿಯ ಕೊರತೆ ಇರುವುದಲ್ಲದೆ, ಅವರ ತೊಂದರೆಗಳಿಗೆ ರೋಗನಿರ್ಣಯ ಮತ್ತು ಚಿಕಿತ್ಸೆ ಕೈಗೊಳ್ಳುವಲ್ಲಿ ಸಹಾನುಭೂತಿಯ ಮಾರ್ಗದ ಕೊರತೆ ಇರುತ್ತದೆ. ಡಿವೈಯು ಹೆಲ್ತ್ಕೇರ್ ಸುರಕ್ಷಿತ, ಬೆಂಬಲದ ಮತ್ತು ಅನುಕೂಲಕರ ಸ್ಥಳಾವಕಾಶವನ್ನು ಮಹಿಳೆಗೆ ಪೂರೈಸುವ ಉಪಕ್ರಮವಾಗಿದೆ. ವೈದ್ಯಕೀಯ ತಂತ್ರಜ್ಞಾನದಲ್ಲಿ ಉನ್ನತೀಕರಣ ಮತ್ತು ಐವಿಎಫ್, ಅಂಡಾಣುಶೀಥÀಲೀಕರಣ ಮತ್ತು ರ‍್ರೋಗೆÀಸಿ(ಬದಲಿ ತಾಯಿ ಸೇವೆ) ಮುಂತಾದ ಚಿಕಿತ್ಸೆ ಲಭ್ಯವಾಗುವುದರೊಂದಿಗೆ ಆಧುನಿಕ ಭಾರತೀಯ ಮಹಿಳೆಗೆ ಮಾಹಿತಿಪೂರ್ಣ ಆಯ್ಕೆಗಳು ಜೀವನದಲ್ಲಿ ಲಭ್ಯವಿರುತ್ತವೆ. ಇತ್ತೀಚಿನ ಸ್ತಿçÃರೋಗ ಶಾಸ್ತç, ಸೌಂದರ್ಯವರ್ಧಕ ಚಿಕಿತ್ಸಾಶಾಸ್ತç, ಫಲವತ್ತತೆ ಮತ್ತು ಮಕ್ಕಳ ಆರೈಕೆ ಚಿಕಿತ್ಸೆಗಳು ಲಭ್ಯವಾಗುವಂತೆ ನಾವು ಶ್ರಮಿಸುತ್ತೇವೆ. ಅವರ ಜೀವನದ ಪ್ರತಿ ಹಂತದಲ್ಲೂ ಮಹಿಳೆಯರು ಸುಂದರವಾಗಿರುವ ಮತ್ತು ಆತ್ಮವಿಶ್ವಾಸ ಹೊಂದಿರುವ ಭಾವನೆ ಹೊಂದಿರಬೇಕೆAದು ನಾವು ಇಚ್ಛಿಸುತ್ತೇವೆ’’ ಎಂದರು.

ಇದಕ್ಕೆ ಧ್ವನಿಗೂಡಿಸಿದ ಡಾ. ಪ್ರಶಾಂತ್ ಗೌಡ ಅವರು ಮಾತನಾಡಿ, “ಮಗು ಜನಿಸುವುದು ಅದ್ಭುತ ಆನಂದ ಮತ್ತು ಸಂಭ್ರಮದ ಕ್ಷಣವಾಗಿರುತ್ತದೆ ಎಂದು ನಾವು ನಂಬಿದ್ದೇವೆ. ನಿಮ್ಮ ಪೋಷಕರಾಗುವ ಪ್ರಯಾಣಕ್ಕೆ ಬೆಂಬಲ ನೀಡುವುದು ನಮ್ಮ ಗುರಿಯಾಗಿದೆ. ಜೊತೆಗೆ ಈ ವಿಧಾನವನ್ನು ಆಹ್ಲಾದಕರ ಮತ್ತು ನೆನಪಿನಲ್ಲಿಡುವ ಸಮಯವಾಗಿಸುವುದು ನಮ್ಮ ಉದ್ದೇಶವಾಗಿದೆ. ಅತ್ಯಂತ ಉನ್ನತ ಅರ್ಹತೆ ಹೊಂದಿರುವ ಮತ್ತು ನಂಬಿಕಾರ್ಹ ವೈದ್ಯರ ತಂಡದ ಜೊತೆಗೆ, ಮಕ್ಕಳು ಮತ್ತು ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾದ ಆವಿಷ್ಕಾರಿ ಚಿಕಿತ್ಸೆಗಳ ಶ್ರೇಣಿಯನ್ನು ನಾವು ಸಾದರಪಡಿಸುತ್ತೇವೆ. ನಮ್ಮ ವೈದ್ಯಕೀಯ ಪರಿಣತಿ ಮತ್ತು ಸಮಗ್ರ ಆರೈಕೆಯಲ್ಲಿ ನವಜಾತ ಶಿಶುಗಳಿಗೆ ಸಂಪೂರ್ಣ ಶ್ರೇಣಿಯ ಹೊರ ರೋಗಿ ವಿಭಾಗದ ಸೇವೆಗಳು ಸೇರಿರುತ್ತವೆ. ಇವುಗಳಲ್ಲಿ ನವಜಾತ ಶಿಶು ಕುರಿತ ಸಮಾಲೋಚನೆ, ಲಸಿಕೆ ನೀಡುವುದು, ಪೋಷಕಾಂಶ ಕುರಿತ ಸಲಹೆ, ಫಿಜಿಯೋಥೆರಪಿ, ಮಾತು ಭಾಷಾ ಚಿಕಿತ್ಸೆ, ಬೆಳವಣಿಗೆಯ ಮೌಲ್ಯೀಕರಣ ಮತ್ತು ೦-೧೪ ವಯಸ್ಸಿನ ಮಕ್ಕಳಿಗೆ ಪುನರ್‌ವಸತಿ ಮುಂತಾದ ಸೇವೆಗಳು ಸೇರಿರುತ್ತವೆ. ಮಕ್ಕಳು ಅವರ ಗರಿಷ್ಟ ಸಾಮರ್ಥ್ಯವನ್ನು ಸಾಧಿಸುವ ಖಾತ್ರಿ ಮಾಡಿಕೊಳ್ಳುವುದಕ್ಕಾಗಿ ನಾವು ಕಠಿಣಶ್ರಮ ವಹಿಸುತ್ತೇವೆ. ಜೊತೆಗೆ ಭವಿಷ್ಯದಲ್ಲಿ ಅವರು ಎದುರಿಸುವ ಅಡೆತಡೆಗಳನ್ನು ನಿವಾರಿಸಿಕೊಳ್ಳಲು ಸುಲಭವಾಗಿಸಿ ವೈಕಲ್ಯದ ಪರಿಣಾಮವನ್ನು ಕನಿಷ್ಠವಾಗಿಸುವುದಕ್ಕಾಗಿಯೂ ನಾವು ಶ್ರಮವಹಿಸುತ್ತೇವೆ’’ ಎಂದರು.

ಡಿವೈಯು ಹೆಲ್ತ್ಕೇರ್‌ನಲ್ಲಿನ ವಾತಾವರಣ, ಮನಸೆಳೆಯುವ ದೃಶ್ಯಗಳು ಮತ್ತು ಕಲಾವಸ್ತುಗಳ ಮೂಲಕ ಸ್ತಿçÃತ್ವ, ಸ್ವಾತಂತ್ರ ಮತ್ತು ಮಾತೃತ್ವ ಮತ್ತು ಪಿತೃತ್ವಗಳನ್ನು ಪ್ರತಿಧ್ವನಿಸುತ್ತದೆ. ಮಕ್ಕಳು ಸಂತಸವಾಗಿರುವ ಮತ್ತು ಚಟುವಟಿಕೆಯಿಂದ ಇರುವ ಭಾವನೆ ಉಂಟಾಗುವAತೆ ಮತ್ತು ಮಹಿಳೆಯರು ಸುಂದರ ಸಂಪೂರ್ಣ ಹಾಗೂ ಪ್ರಶಾಂತ ಭಾವನೆ ಹೊಂದುವAತೆ ಈ ಕೇಂದ್ರದ ವಾತಾವರಣವನ್ನು ಸೃಷ್ಟಿಸಲಾಗಿದೆ.

ಡಿವೈಯುನಲ್ಲಿ ಲಭ್ಯವಿರುವ ಸೇವೆಗಳನ್ನು ಆಗಾಗ್ಗೆ ಬಳಸಿಕೊಳ್ಳುವ ಖ್ಯಾತ ಗಣ್ಯರಲ್ಲಿ ಮಲೈಕಾ ಅರೋರ, ಸಾನಿಯಾ ಮಿರ್ಜಾ, ಕಿಮ್ ಕರ್ದಾಶಿಯಾನ್, ಡ್ರೂö್ಯ ಬ್ಯಾರಿಮೋರ್, ಜೆಸಿಕಾ ಬೆನ್ಸನ್, ಶೃತಿ ಹಾಸನ್ ಮುಂತಾದವರು ಸೇರಿರುತ್ತಾರೆ.

Related