ಕೆ.ಆರ್.ಪುರ , ಮಾ. 22: ಭಾರತದಾದ್ಯಂತ ಇಂದು ಜನತಾ ಕರ್ಪ್ಯೂವನ್ನು ನಡೆಸಲಾಗುತ್ತಿದೆ, ಈ ಜನತಾ ಕರ್ಪ್ಯೂಗೆ ಎಲ್ಲಾಕಡೆಯಿಂದ ಜನರು ಬೆಂಬಲ ಸೂಚಿಸಿದ್ದಾರೆ.
ಕೆ.ಆರ್.ಪುರ, ವೈಟ್ ಫೀಲ್ಡ್, ಬೆಂಗಳೂರು ಗ್ರಾಮಾಂತರ ಹೊಸಕೋಟೆ ನಗರಗಳು ಸಂಪೂರ್ಣ ಸ್ತಬ್ದ. ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿದ್ದು, ವಾಹನಗಳ ಸಂಚಾರವಿಲ್ಲದೆ ಬಿಕೋ ಎನ್ನುತ್ತಿರುವ ರಸ್ತೆಗಳು. ಓಲ್ಡ್ ಮದ್ರಾಸ್ ರಸ್ತೆಯಲ್ಲಿ ಬೆರಳೆಣಿಕೆಯಷ್ಟು ಖಾಸಗಿ ವಾಹನಗಳ ಸಂಚಾರ. ಮನೆಯಿಂದ ಹೊರಗೆ ಬಾರದೆ ಜನತಾ ಕರ್ಪ್ಯೂಗೆ ಬೆಂಬಲ ಸೂಚಿಸುತ್ತಿರುವ ಜನರು.