ಎನ್ ಮಹೇಶ್ ಬಿಜೆಪಿ ಸೇರ್ಪಡೆ ಸಿಎಂ ಏನಂದ್ರೂ..? ಇಲ್ಲಿದೆ ನೋಡಿ

ಎನ್ ಮಹೇಶ್ ಬಿಜೆಪಿ ಸೇರ್ಪಡೆ ಸಿಎಂ ಏನಂದ್ರೂ..? ಇಲ್ಲಿದೆ ನೋಡಿ

ಬೆಂಗಳೂರು- ಬಿಎಸ್‌ಪಿ ಶಾಸಕ ಎನ್ ಮಹೇಶ್  ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಕ್ಷೇತ್ರದ ಶಾಸಕರಾದ ಎನ್ ಮಹೇಶ್ ಈ ಹಿಂದೆ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಸಮ್ಮಿಶ್ರ ಸರ್ಕಾರ ಪತನಗೊಂಡು ಅಸ್ಥಿತ್ವಕ್ಕೆ ಬಂದ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಒಲವು ತೋರಿಸಿ ಬೆಂಬಲ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗುತ್ತಾರೆಂಬ ಸುದ್ದಿ ಕೇಳಿಬಂದಿತ್ತು. ಈ ಮಧ್ಯೆ ಬಿಎಸ್‌ಪಿ ಪಕ್ಷದ ನಿಯಮ ಉಲ್ಲಂಘಿಸಿದ್ದಕ್ಕಾಗಿ ಶಾಸಕ ಮಹೇಶ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದರು.

ಬಹಳ ದೊಡ್ಡ ಸಂಘಟನಾ ಶಕ್ತಿಯಿದೆ- ಬೊಮ್ಮಾಯಿ

ಮಹೇಶ್ ಚಳುವಳಿಯ ಮೂಲಕ ಅಧಿಕಾರಕ್ಕೆ ಬಂದವರು. ನನ್ನ ಆತ್ಮೀಯರು, ಅವರ ಸಂಘಟನಾ ಶಕ್ತಿ ಬಹಳ ದೊಡ್ಡ ಪ್ರಮಾಣದಲ್ಲಿದೆ. ಶಾಸಕರಾಗುವುದಕ್ಕೂ ಮುಂಚೆಯೇ ದಲಿತ ಸಮುದಾಯದವರ ಮೆಚ್ಚುಗೆಗೆ ಪಾತ್ರರಾದವರು. ಹಾಗು ಕೊಳ್ಳೆಗಾಲದ ಎಲ್ಲಾ ಸಮುದಾಯದವರ ಪ್ರೀತಿ, ವಿಶ್ವಾಸ ಗೆದ್ದವರು. ಬಿಜೆಪಿಯ ಚಿಂತನೆ ಮನವರಿಕೆಯಾದ ಮೇಲೆ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಕೈ ಜೋಡಿಸಿದ್ದರು. ಮಹೇಶ್ ಸೇವೆ ಕ್ಷೇತ್ರಕ್ಕೆ ಮಾತ್ರವಲ್ಲದೆ ಇಡೀ ರಾಜ್ಯಕ್ಕಾಗಲಿ ಎಂದು ಬೊಮ್ಮಾಯಿ ಶುಭ ಕೋರಿದ್ದಾರೆ.

ಯಡಿಯೂರಪ್ಪ ಸಿ.ಎಂ ಆದಾಗ ಬಿ.ವೈ ವಿಜೇಂದ್ರ ಕೊಳ್ಳೆಗಾಲ ಭಾಗದಲ್ಲಿ ಸಾಕಷ್ಟು ಸುತ್ತಾಡಿ ಪಕ್ಷ ಸಂಘಟನೆ ಮಾಡಿದ್ದಾರೆ. ಇದೀಗ ಆ ಭಾಗದ ಶಾಸಕ ಮಹೇಶ್ ಅವರು ಬಿಜೆಪಿ ಸೇರಿದ್ದರಿಂದ ವಿಜೇಂದ್ರ ಶ್ರಮಕ್ಕೆ ಮಹೇಶ್ ಶಕ್ತಿ ಸೇರಿ ಪಕ್ಷ ಬಲಗೊಳ್ಳಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಹೇಶ್ ಪಕ್ಷಕ್ಕೆ ಸೇರಿದ್ದು ಸಂತೋಷದ ಸಂಗತಿ. ಬಿಜೆಪಿಗೆ ಬಂದ ದೊಡ್ಡ ಶಕ್ತಿ. ವಿಶೇಷವಾಗಿ ಚಾಮರಾಜನಗರ ಭಾಗದಲ್ಲಿ ಇದರಿಂದ ಪಕ್ಷಕ್ಕೆ ಹೆಚ್ಚಿನ ಬಲ ಬಂದಂತಾಗಿದೆ  ಎಂದು ಮಾಜಿ ಸಿ.ಎಂ ಯಡಿಯೂರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related