ಧಾರವಾಡ: ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಒಂದಲ್ಲ ಒಂದು ಆಶ್ಚರ್ಯಕರ ಭವಿಷ್ಯವನ್ನು ನುಡಿತಲೇ ಇರುತ್ತಾರೆ ಅದರಲ್ಲಿ ಈಗಾಗಲೇ ಹಲವು ಭವಿಷ್ಯಗಳು ನಿಜವಾಗಿದ್ದು ಅದರಂತೆ ಮತ್ತೆ ಇದೀಗ ಆಶ್ಚರ್ಯಕರ ಭವಿಷ್ಯವನ್ನು ನೋಡಿದಿದ್ದಾರೆ.
ಹೌದು, ಎರಡ್ಮೂರು ಪ್ರಧಾನಿಗಳ ಸಾವು ಆಗಲಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನೋಡಿದಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಭೂ ಕುಸಿತ, ಜಲಪ್ರಳಯ ಲಕ್ಷಣ ಇದೆ. ಗಾಳಿಯಿಂದಲೂ ತೊಂದರೆ ಆಗಲಿದೆ. ಆಕಾಶ ತತ್ವ ಆಗಲಿದೆ. ಆ ಆಕಾಶ ತತ್ವ ಏನು ಅನ್ನೋದನ್ನು ಶ್ರಾವಣದಲ್ಲಿ ಹೇಳುವೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಇದುಮಾತ್ರವಲ್ಲದೆ ರಾಜಕೀಯ ಬಗ್ಗೆ ಮಾತನಾಡಿರುವ ಕೋಡಿಶ್ರೀ, ರಾಷ್ಟ್ರದಲ್ಲಿ ಅಧಿಕಾರಕ್ಕಾಗಿ ಕೂಡಿದ್ದಾರೆ, ಇನ್ನೂ ಅಂಗಡಿ ಓಪನ್ ಆಗಿಲ್ಲ. ವ್ಯಾಪಾರ ಶುರುವಾಗಲಿ. ಆ ಬಳಿಕ ರಾಷ್ಟ್ರ ರಾಜಕಾರಣದ ಭವಿಷ್ಯ ಹೇಳುವೆ. ಅದೆಲ್ಲದರ ಬಗ್ಗೆ ಸಮಗ್ರವಾಗಿ ಶ್ರಾವಣದಲ್ಲಿ ಹೇಳುವೆ. ಅಶುಭ ಈಗಲೇ ನುಡಿಯಬಾರದು. ಶುಭವೋ ಅಶುಭವೋ ಎಂದು ಶ್ರಾವಣದಲ್ಲಿ ಹೇಳುವೆ ಎಂದು ಸ್ಪಷ್ಟಪಡಿಸಿದರು.