ಮೊದಲ ದಿನವೇ KGF-2 ದಾಖಲೆ ಮುರಿದ VR..!

  • In Cinema
  • July 28, 2022
  • 64 Views
ಮೊದಲ ದಿನವೇ KGF-2 ದಾಖಲೆ ಮುರಿದ VR..!

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ಭರ್ಜರಿಯಾಗಿ ತೆರೆಕಂಡಿದೆ. ಇರದ ನಡುವೆ ವಿಕ್ರಾಂತ್ ರೋಣ ಸಿನಿಮಾವು ಕೆಜಿಎಫ್ – 2 ಚಿತ್ರದ ದಾಖಲೆಯೊಂದನ್ನು ಬಿಡುಗಡೆ ಆದ ಮೊದಲ ದಿನವೇ ಮುರಿದು ಹಾಕಿದೆ.

ಸ್ಯಾಂಡಲ್​ವುಡ್​ನಲ್ಲಿ ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದ ಕಿಚ್ಚ ಸುದೀಪ್​ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಇಂದು ಭರ್ಜರಿಯಾಗಿ ತೆರೆಕಂಡಿದೆ. ಸಿನಿಮಾ ನೋಡಿದ ಎಲ್ಲರೂ ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಕೆಜಿಎಫ್ 2 ನಂತರ ಮತ್ತೊಂದು ಬಿಗ್​ ಸಿನಿಮಾ ಸ್ಯಾಂಡಲ್​ವುಡ್​ನಿಂದ ಹೊರಬಂದಿದೆ. ಅದರಲ್ಲಿಯೂ ಸುದೀಪ್​ ಅವರ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದವರಿಗೆ ಭರ್ಜರಿ ಗಿಫ್ಟ್ ಸಿಕ್ಕಂತಾಗಿದೆ.

ವಿಶ್ವದಾದ್ಯಂತ ಕಿಚ್ಚನ ಅಭಿಮಾನಿಗಳು ಸಿನಿಮಾ ನೋಡಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ಸಿನಿಮಾ ಬಗ್ಗೆ ಈಗಾಗಲೇ ರಿವ್ಯೂ ಓಡಾಡುತ್ತಿದೆ. ಕಿಚ್ಚನ ಅಭಿನಯಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಇದರ ನಡುವೆ ವಿಕ್ರಾಂತ್ ರೋಣ ಸಿನಿಮಾವು ಕೆಜಿಎಫ್ 2 ಚಿತ್ರದ ದಾಖಲೆಯೊಂದನ್ನು ಬಿಡುಗಡೆ ಆದ ಮೊದಲ ದಿನವೇ ಮುರಿದು ಹಾಕಿದೆ.

Related