ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ ಒಂದು ತಿಂಗಳಿಂದ ಪರಪ್ಪನ ಅಗ್ರಹಾರ ಜೈಲು ಸೆರೆವಾಸ ಅನುಭವಿಸುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ದಿನ ಕಳೆದಂತೆ ಮತ್ತಷ್ಟು ಸಂಕಷ್ಟ ಎದುರಾಗುತ್ತಿದೆ.
ಹೌದು 30 ದಿನ ಕಳಿಯುತ್ತಾ ಬಂದರೂ ದಾಸನಿಗೆ ದಾರಿ ತೋರುತ್ತಿಲ್ಲ. ಆರೋಪಿಯಾಗಿ ಜೈಲು ಸೆರೆವಾಸ ಅನುಭವಿಸುತ್ತಿರುವ ನಟ ದರ್ಶನ್ ಅವರಿಗೆ ಜೈ ಲೂಟ ಸೇರದೆ ದಿನದಿಂದ ದಿನಕ್ಕೆ ಆರೋಗ್ಯ ಹದಗೆಡುತ್ತಿದೆ ಎಂಬ ಕಾರಣಕ್ಕೆ ಮನೆ ಊಟ ಮತ್ತು ಹಾಸಿಗೆ, ದಿಂಬು ಬೇಕೆಂದು ದರ್ಶನ್ ಅವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಚಾಮುಂಡೇಶ್ವರಿ ಅನುಗ್ರಹದಿಂದ ಕಾವೇರಿಗೆ ಬಾಗಿನ ಅರ್ಪಿಸುವ ಕಾಲ ದೊರೆತಿದೆ: ಡಿಸಿಎಂ
ಜೈಲುಟ ಸೇರದೆ ನಟ ದರ್ಶನ್ ಅವರು ಮನೆ ಊಟ ಬೇಕೆಂದು ರೀಟ್ ಅರ್ಜಿಯನ್ನು ಕೋರ್ಟ್ ಗೆ ಸಲ್ಲಿಸಿದ್ದರು.
ಮನೆ ಊಟ, ಪುಸ್ತಕ, ಹಾಸಿಗೆಗಾಗಿ ಮನವಿ ಮಾಡಿ ದರ್ಶನ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಕಳೆದ ಶನಿವಾರ ನಡೆದಿತ್ತು. ಅಂದು ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಇತ್ಯರ್ಥ ಪಡಿಸಿಕೊಳ್ಳುವಂತೆ ಸೂಚನೆ ನೀಡಿತ್ತು. ಹೈಕೋರ್ಟ್ ನಿರ್ದೇಶನದಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ನಟ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದು. ಇದೀಗ ಇಂದು (ಜುಲೈ 22) ರಂದು ದರ್ಶನ್ ಸಲ್ಲಿಕೆ ಮಾಡಿದ್ದ ಮನೆಯೂಟದ ರಿಟ್ ಅರ್ಜಿ ವಿಚಾರಣೆಗೆ ಬರಲಿದೆ. ಪರಪ್ಪನ ಅಗ್ರಹಾರದಲ್ಲಿರೋ ದಾಸನಿಗೆ ಮನೆಯೂಟ ಸಿಗುತ್ತಾ? ಇಲ್ವಾ ಎಂಬ ಪ್ರಶ್ನೆ ಮೂಡಿದೆ.
ಒಟ್ಟಾರೆಯಾಗಿ ಜೈಲು ಅತಿಥಿಯಾಗಿರುವ ಕಾಟೇರನಿಗೆ ಜೈಲುಟನಾ ಅಥವಾ ಮನೆ ಊಟ ಸಿಗುವ ಭಾಗ್ಯ ಏನಾದ್ರೂ ಒದಗಿ ಬರುತ್ತದೆ ಎಂದು ಕಾದು ನೋಡಬೇಕಿದೆ.