ಮಾಲೂರಿನಲ್ಲಿ ನ.4ರಂದು ಅದ್ದೂರಿ ಕನ್ನಡ ರಾಜ್ಯೋತ್ಸವಕ್ಕೆ ತಯಾರಿ

  • In State
  • October 28, 2024
  • 229 Views
ಮಾಲೂರಿನಲ್ಲಿ ನ.4ರಂದು ಅದ್ದೂರಿ ಕನ್ನಡ ರಾಜ್ಯೋತ್ಸವಕ್ಕೆ ತಯಾರಿ

ಮಾಲೂರು: ಇದೇ ನವೆಂಬರ್ 4 ರಂದು ಕರ್ನಾಟಕ ಜನ ಸೇವಕರ ಸಂಘದ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಟೇಕಲ್  ಹೋಬಳಿಯ ಕೆ.ಜಿ.ಹಳ್ಳಿ ನಾಡ ಕಚೇರಿ ಮುಂಭಾಗದಲ್ಲಿ  ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ  ಕೆ.ವಿ.ಆರ್.ಮಂಜುನಾಥ್ ಗೌಡ ಹಾಗೂ ತಾಲ್ಲೂಕು ಅಧ್ಯಕ್ಷ ಡಿ.ಸಿ.ವೆಂಕಟಚಲಪತಿ ಗೌಡ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಕಳೆದ 19 ವರ್ಷಗಳಿಂದ ನಿರಂತರವಾಗಿ ಕೋಲಾರ ಜಿಲ್ಲೆಯ ಸಂತ್ರಸ್ತ ಜನರಿಗೆ ಮತ್ತು ಹಿರಿಯರಿಗೆ ಹಾಗೂ ಮಕ್ಕಳ ಆಶ್ರಮಗಳಿಗೆ ದಿನಸಿ ವಸ್ತುಗಳು (ಅಕ್ಕಿ, ಬೇಳೆ, ತರಕಾರಿಗಳು, ಸೀರೆ, ಬಟ್ಟೆಗಳು), ವಿದ್ಯಾರ್ಥಿಗಳಿಗೆ ಪುಸ್ತಕ, ಲೇಖನಿ ಸಾಮಗ್ರಿಗಳ ವಿತರಣೆ ಮಾಡಿಕೊಂಡು ಬರುತ್ತಿದ್ದೇವೆ. ಇನ್ನೂ ಅನೇಕ ಕನ್ನಡಪರ, ಸಾಮಾಜಿಕ ಸೇವೆಗಳನ್ನು ಮಾಡುತ್ತಿದ್ದೇವೆ.

ಇದಕ್ಕೆಲ್ಲಾ ಸಹಕರಿಸಿದ ಕನ್ನಡ ಅಭಿಮಾನಿಗಳಿಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು. ಇದೇ ನವೆಂಬರ್ 4 ರಂದು 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನಂತರ ಸಾರ್ವಜನಿಕರಿಗೆ ಮತ್ತು ಮಹಿಳೆಯರಿಗೆ ಸೀರೆ, ಅಂಗವಿಕಲರಿಗೆ ವಾಕರ್ ಸ್ಟಿಕ್, ಬಡವರಿಗೆ ಅಕ್ಕಿ ಹಾಗೂ ಶಾಲಾ ಮಕ್ಕಳಿಗೆ ಪುಸ್ತಕ, ಶೈಕ್ಷಣಿಕ ಸಾಮಗ್ರಿಗಳು, ಕರ್ನಾಟಕ ರಾಜ್ಯಾದ್ಯಂತ ವಿತರಣೆ ಮಾಡಲಾಗುತ್ತಿದೆ. ಆದ್ದರಿಂದ ಕನ್ನಡದ ಅಭಿಮಾನಿಗಳು, ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ, ನಾಡ ದೇವತೆ ಶ್ರೀ ಭುವನೇಶ್ವರಿ ದೇವಿಗೆ ಗೌರವ ಸಲ್ಲಿಸೋಣ ಎಂದರು.

Related