ಪಂದ್ಯಕ್ಕೂ ಮುನ್ನವೇ ಕನ್ನಡತಿ ಸಾಧನೆ..!

ಪಂದ್ಯಕ್ಕೂ ಮುನ್ನವೇ ಕನ್ನಡತಿ ಸಾಧನೆ..!

ಟೋಕಿಯೋ ಒಲಿಂಪಿಕ್ 2020ರಲ್ಲಿ ಸ್ಥಾನ ಪಡೆದ 120 ಆಟಗಾರರ ಪೈಕಿ ಅದಿತಿ ಅಶೋಕ್ ಕೂಡ ಒಬ್ಬರಾಗಿದ್ದಾರೆ. ಬೆಂಗಳೂರು ಮೂಲದ ಈ ಕನ್ನಡತಿ ಟೋಕಿಯೋ ಒಲಿಂಪಿಕ್ಸ್ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಗಾಲ್ಫರ್ ಎನಿಸಿಕೊಂಡಿದ್ದಾರೆ.

ವಿಶ್ವಶ್ರೇಯಾಂಕಿತರ ಪಟ್ಟಿಯಲ್ಲಿ 45ನೇ ಸ್ಥಾನದಲ್ಲಿರುವ ಅದಿತಿಗೆ ಇದು ಮೊದಲ ಒಲಿಂಪಿಕ್ ಅಲ್ಲ. ಇವರು 2016ರ ರಿಯೋ ಒಲಿಂಪಿಕ್ಸ್ನಲ್ಲಿಯೂ ಭಾರತ ತಂಡವನ್ನ ಪ್ರತಿನಿಧಿಸಿದ್ದರು. ಇದೀಗ ಎರಡನೇ ಬಾರಿಗೆ ಒಲಿಂಪಿಕ್ಸ್ನಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಅದಿತಿ ಸಜ್ಜಾಗಿದ್ದಾರೆ.

ಪಂಡಿತ್ ಗುಡ್ಲಮಣಿ ಅಶೋಕ್ ಹಾಗೂ ಮಾಶ್ ಅಶೋಕ್ ದಂಪತಿಯ ಪುತ್ರಿ ಅದಿತಿ ಅಶೋಕ್ 1998 ಮಾರ್ಚ್ 29ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ವೃತ್ತಿಪರ ಗಾಲ್ಫರ್ ಆಗಿರುವ ಅದಿತಿ ತಮ್ಮ 5ನೇ ವರ್ಷದಿಂದಲೇ ಗಾಲ್ಫ್ ಅಭ್ಯಾಸವನ್ನ ಶುರು ಮಾಡಿದ್ದರು. 2016ರಲ್ಲಿ ರಿಯೋ ಒಲಿಂಪಿಕ್ಸ್ನಲ್ಲಿ ಭಾಗಿಯಾಗಿದ್ದು ಮಾತ್ರವಲ್ಲದೇ ಮಹಿಳೆಯರ ಯುರೋಪಿಯನ್ ಟೂರ್ ಹಾಗೂ ಎಲ್‌ಪಿಜಿಎ ಪ್ರವಾಸದಲ್ಲಿಯೂ ಭಾಗಿಯಾದ ಆಟಗಾರ್ತಿಯಾಗಿದ್ದಾರೆ.

ಅದಿತಿ ಅಶೋಕ್ ಲಲ್ಲಾ ಐಚಾ ಟೂರ್ ಸ್ಕೂಲ್ ವಿಜೇತಳಾದ ಭಾರತದ ಮೊದಲ ಹಾಗೂ ಕಿರಿಯ ಆಟಗಾರ್ತಿ ಎನಿಸಿದ್ದಾರೆ. ಅಲ್ಲದೇ ಏಷಿಯನ್ ಯೂತ್ ಗೇಮ್ಸ್ (2013)ರಲ್ಲಿ ಗಾಲ್ಫ್ ಆಟವಾಡಿದ ಏಕೈಯ ಭಾರತೀಯ ಎಂಬ ಹೆಗ್ಗಳಿಕೆ ಕೂಡ ಇವರದ್ದಾಗಿದೆ. ಭಾರತೀಯ ಸರ್ಕಾರ ಅದಿತಿ ಅಶೋಕ್‌ರ ಸಾಧನೆಯನ್ನ ಗೌರವಿಸಿ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

Related