ಕನಕದಾಸ ಜಯಂತಿ ಆಚರಣೆ

ಕನಕದಾಸ ಜಯಂತಿ ಆಚರಣೆ

ಶಹಾಪುರ: ನಗರದ ವಾರ್ಡ್ ನಂ. ೩೧ ರ ಕನಕ ನಗರ ಬಡವಣೆಯಲ್ಲಿ ದಾಸ ಶ್ರೇಷ್ಠ ಕನಕದಾಸರ ಜಯಂತಿಯ ನಿಮಿತ್ಯ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು.

ಪೌರಾಯುಕ್ತ ರಮೇಶ ಬಡಿಗೇರ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ಕನಕ ದಾಸರು ಅಂದಿನ ಸಮಾಜದ ಅಂಕು ಡೊಂಕುಗಳನ್ನು ಕಿರ್ತನೆಗಳ ಮೂಲಕ ತಿದಿದ್ದ ಖ್ಯಾತಿ ಕನಕದಾಸರದ್ದು, ಕಾಗಿನೆಲೆ ಅಧಿಕೇಶವನ ಅಂಕಿತ ನಾಮದಲ್ಲಿ ರಚಿಸಿದ ಕೀರ್ತನೆಗಳು ಇಂದಿಗೂ ಜನ ಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ ಎಂದರು. ಇದನ್ನೂ ಓದಿ: ಕನಕ ಭವನದ ಕಟ್ಟಡ ನಿರ್ಮಾಣಕ್ಕೆ ಶಾಸಕರಿಂದ ಗ್ರೀನ್ ಸಿಗ್ನಲ್

ಬಡವಣೆಯ ಜನತೆಯಿಂದ ಪೌರಾಯುಕ್ತ ರಮೇಶ ಬಡಿಗೇರ ಹಾಗೂ ವಾರ್ಡ್ ನಂ ೩೧ ರ ನಗರಸಭೆ ಸದಸ್ಯ ಬಸವರಾಜ ಚೆನ್ನೂರ ಹಾಗೂ ಅಪ್ಪಣ್ಣ ದಶವಂತ ಅವರಿಗೆ ಹೈಮಾಸ್ಕ್, ವಿದ್ಯುತ್ ದೀಪಗಳ ಅಳವಡಿಸಲು ಬಡವಣೆಯ ಜನತೆ ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಅಳವಡಿಸಿ ಅನುಕೂಲ ಮಾಡಿಲಾಗುವುದು ಎಂದು ನಗರಸಭೆ ಸದಸ್ಯರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಯಾಳಗಿ, ಬಸವರಾಜ ವಿಭೂತಿಹಳ್ಳಿ, ಗಿರೆಪ್ಪಗೌಡ ಬಾಣತಿಹಾಳ್, ಗೌಡಪ್ಪಗೌಡ ಶಖಾಪುರ, ವಿಠಲ್ ವಗ್ಗಿ, ಈರಣ್ಣಗೌಡ ಮಲ್ಲಬಾದಿ, ಶೇಖರ ದೊರಿ, ಮಲ್ಲಿಕಾರ್ಜುನ್ ಕಂದಕೂರ್, ಅಶೋಕ್ ದಿನ್ನಿ, ಮಹಾಂತಗೌಡ ಚಾಮನಾಳ, ಗೌಡಪ್ಪಗೌಡ ಚಾಮನಾಳ, ಹೊನ್ನಪ್ಪ ಎಇ, ಮಲ್ಲಣಗೌಡ ಕ್ಯಾತ್ನಳ, ನಗರಸಭೆ ಸದಸ್ಯ ಬಸವರಾಜ ಚೆನ್ನೂರ, ಅಪ್ಪಣ್ಣ ದಶವಂತ, ಶಾಂತಗೌಡ ನಾಗನಟಿಗಿ, ಮಹಾಂತಗೌಡ ಚಾಮನಾಳ, ನಿಂಗಣ್ಣ ಪೂಜಾರಿ ಹಬ್ಬಳ್ಳಿ, ಅಯ್ಯಣ್ಣ ಇನಾಂದಾರ್, ಗುರುರಾಜ ಸಗರ, ರಾಯಪ್ಪ ಚಲುವಾದಿ, ಮಲ್ಲಪ್ಪ ಆಂದೋಲ, ಅಲ್ಲಾ ಪಟೇಲ್ ಮಕ್ತಾಪುರ, ರೇವಣ್ಣಸಿದ್ದಪ್ಪ ರಾಜಾಪುರ, ಭೀಮರಾಯ ಹೊಸಮನಿ, ಬಸವರಾಜ ಸಾಹು, ಮಹೇಶ ಮೌರ್ಯ, ಬಿರಪ್ಪ ರಾಂಪೂರ ಇದ್ದರು.

Related