ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಜಮೀರ್

ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಜಮೀರ್

ತುಮಕೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಬಹುಮತದಿಂದ ಗೆದ್ದು ಅಧಿಕಾರವನ್ನು ತನ್ನದಾಗಿಸಿಕೊಂಡಿದೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಶಾಸಕ ಜಮೀರ್ ಅಹ್ಮದ್ ರವರು ಮತ್ತೊಮ್ಮೆ ತಮ್ಮ ಮಂತ್ರಿ ಗಿರಿಯನ್ನು ಗಿಟ್ಟಿಸಿಕೊಂಡಿದ್ದಾರೆ. ಶಾಸಕ ಜಮೀರ್ ಅಹ್ಮದ್ ಸಚಿವರಾದಾಗೆಲ್ಲ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿರುವುದು ನಮಗೆಲ್ಲರಿಗೂ ಗೊತ್ತಿರುವ ವಿಷಯ. ಹಾಗೆಯೇ ಇಂದು ತುಮಕೂರಿನ ಜಮೀರ್ ಅಹ್ಮದ್ ಸಿದ್ದಗಂಗಾ ಮಠಕ್ಕೆ ಹಾಗೂ ದರ್ಗಾ ಗೆ ಭೇಟಿ ನೀಡಿದ್ದಾರೆ.

ನೂತನ ಸಚಿವ ಜಮೀರ್ ಅಹಮದ್​ ಖಾನ್ ಅವರು ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು, ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.

ಸಿದ್ದಗಂಗಾ ಮಠಕ್ಕೆ ನಾನು ಹೊಸದಾಗಿ ಬರುತ್ತಿಲ್ಲ. ನಾನು 2006 ರಲ್ಲಿ ಮಂತ್ರಿಯಾಗಿದ್ದೆ. ಅವಾಗ ಶಿವಕುಮಾರ ಸ್ವಾಮೀಜಿಗಳು ಇದ್ದರು.‌ ಇಲ್ಲಿಗೆ ಬಂದು ಅಶಿರ್ವಾದ ಪಡೆದುಕೊಂಡು ಹೋಗಿದ್ದೆ. 2018 ರಲ್ಲೂ ಸಚಿವನಾಗೋಕೆ ದೇವರು ಅವಕಾಶ ಮಾಡಿಕೊಟ್ಟಿತ್ತು. ಅವಾಗಲು ಸ್ವಾಮೀಜಿಗಳ ಅಶಿರ್ವಾದ ಪಡೆದುಕೊಂಡು ಹೋಗಿದ್ದೆ. ಇವತ್ತು ಮಂತ್ರಿಯಾಗಿದಿನಿ, ಇವತ್ತು ಬಂದು ಸ್ವಾಮೀಜಿಗಳ ಅಶಿರ್ವಾದ ಪಡೆದುಕೊಂಡಿದ್ದೇನೆ ಎಂದರು.

ಇನ್ನು ಸಿದ್ದಗಂಗಾ ಮಠಕ್ಕೆ ಬಿಡುಗಡೆಯಾಗಿದ್ದ ಅನುದಾನವನ್ನ ಸರ್ಕಾರ ತಡೆಹಿಡಿದ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ನಾನು ಮುಖ್ಯಮಂತ್ರಿಗಳಿಗೆ ವಿಚಾರ ತಿಳಿಸುತ್ತೇನೆ. ಅನುದಾನ ತಡೆಹಿಡಿದ ಬಗ್ಗೆ ಸ್ವಾಮೀಜಿಗಳ ಬಳಿ ಚರ್ಚೆ ಮಾಡಿಲ್ಲ ಎಂದರು.

ಕಳೆದ ವರ್ಷ 10 ಸಾವಿರ ಮಕ್ಕಳು ಇದ್ರಂತೆ. ಈ ವರ್ಷ ಅಡ್ಮೀಶನ್ ಜಾಸ್ತಿ ಬರ್ತಿದೆಯಂತೆ. ಬರುವ ವರ್ಷ ಇಲ್ಲಿ ಹೆಚ್ಚಿನ ಕಟ್ಟಡ ಕಟ್ಟಿ ಹೆಚ್ಚಿನ ಮಕ್ಕಳಿಗೆ ಶಿಕ್ಷಣ ಕೊಡಿ ಎಂದು ನಾನು ಕೂಡಾ ಅವರ ಬಳಿ ಮನವಿ ಮಾಡಿದ್ದೇನೆ. ಬರುವ ವರ್ಷ ಹೆಚ್ಚಿನ ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ

 

Related