ತಮಿಳು ನಟ ವಿಜಯ್ಗೆ ಐಟಿ ಶಾಕ್

ತಮಿಳು ನಟ ವಿಜಯ್ಗೆ ಐಟಿ ಶಾಕ್

ಚೆನ್ನೈ,ಫೆ. 6 : ತಮಿಳು ನಟ ವಿಜಯ್ ಅವರಿಗೆ ಐಟಿ ಶಾಕ್ ನೀಡಿದ್ದು, ಸಿನಿಮಾ ಶೂಟಿಂಗ್ ಸೆಟ್ನಲ್ಲೇ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ‘ಬಿಗಿಲ್’ ಸಿನಿಮಾ ನಿರ್ಮಿಸಿದ್ದ ಎಜಿಎಸ್ ಸಿನಿಮಾ ಸಂಸ್ಥೆಯ ಕಚೇರಿಗಳಲ್ಲಿ ಶೋಧ ಕೈಗೊಂಡಿದೆ. ಸದ್ಯ ಐಟಿ ಅಧಿಕಾರಿಗಳು ಎಜಿಎಸ್ ಸಂಸ್ಥೆಗೆ ಸಂಬಂಧಿಸಿದ 20 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ದಾಳಿ ನಡೆದ ವೇಳೆ ವಿಜಯ್ ಅವರು ತಮಿಳುನಾಡಿನ ಕುಡಲೂರು ಜಿಲ್ಲೆಯ ನೈವೇಲಿಯಲ್ಲಿ ತಮ್ಮ ಮುಂಬರುವ ‘ಮಾಸ್ಟರ್’ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ಐಟಿ ಅಧಿಕಾರಿಗಳು ಅಲ್ಲಿಯೇ ವಿಜಯ್ ಅವರ ವಿಚಾರಣೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರದ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಕಳೆದ ವರ್ಷ ಬಿಡುಗಡೆಯಾಗಿದ್ದ ಬಿಗಿಲ್ ಸಿನಿಮಾ ಸೂಪರ್ ಹಿಟ್ ಆಗಿದ್ದು, ಚಿತ್ರದ ಕಲೆಕ್ಷನ್ 180 ಕೋಟಿ ರೂ. ಗಳಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಚಿತ್ರದ ಕಲೆಕ್ಷನ್ ಬಗ್ಗೆ ವಿವರಣೆ ಪಡೆಯಲು ಈ ಹಿಂದೆ ಐಟಿ ಇಲಾಖೆ ಸಮನ್ಸ್ ಜಾರಿ ಮಾಡಿತ್ತು.

Related