ರೈತ-ಕೂಲಿಕಾರನ ಸಾವಿಗೆ ಬೆಲೆ ಇಲ್ಲವೇ? ಜಿಲ್ಲಾಧಿಕಾರಿಗೆ ತರಾಟೆ

ರೈತ-ಕೂಲಿಕಾರನ ಸಾವಿಗೆ ಬೆಲೆ ಇಲ್ಲವೇ? ಜಿಲ್ಲಾಧಿಕಾರಿಗೆ ತರಾಟೆ

ಹಾಸನ : ಈ ಭಾಗದಲ್ಲಿ ಪದೇಪಡೆ ಕಾಡಾನೆ ದಾಳಿಯಾಗುತ್ತಿದ್ದು, ರೈತರು-ಕಾರ್ಮಿಕರು ಬಲಿಯಾಗುತ್ತಿದ್ದಾರೆ ಎಂದು ಹಾಸನ ಜಿಲ್ಲಾಧಿಕಾರಿ ವಿರುದ್ಧ ರೈತರು ಕಿಡಿಕಾರಿದ್ದಾರೆ.

ಸಕಲೇಶಪುರ ತಾಲೂಕಿನ ಹಸಿಡೆ ಗ್ರಾಮದಲ್ಲಿ ಬುಧವಾರ ಸಂಜೆ ಕಾಡಾನೆ ದಾಳಿಗೆ ಕೂಲಿಕಾರ್ಮಿಕ ವಸಂತ್ (55) ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು. ವಸಂತ್‌ರ ಮೃತದೇಹ ಇಟ್ಟುಕೊಂಡು ಗುರುವಾರ ಪ್ರತಿಭಟನೆ ನಡೆಸುತ್ತಿದ್ದ ರೈತರು ಜಿಲ್ಲಾಧಿಕಾರಿ ಆರ್. ಗಿರೀಶ್‌ಗೆ ತರಾಟೆಗೆ ತೆಗೆದುಕೊಂಡರು.

ನಮ್ಮ ಸಾವಿಗೆ ಬೆಲೆ ಇಲ್ವಾ? ಎಂದು ಪ್ರಶ್ನಿಸಿದರು. ಸ್ಥಳದಲ್ಲೇ ಇದ್ದ ಸಕಲೇಶಪುರ ಶಾಸಕ ಎಚ್.ಕೆ. ಕುಮಾರಸ್ವಾಮಿ, ಹಾಸನ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕರೆಯಿಂದ ತಿಳಿಸಿದರು.

ಫೆ.16 ತುರ್ತು ಸಭೆ ಮಾಡಿ ಕಾಡಾನೆ ಹಾವಳಿಗೆ ತಡೆ ಹಾಗೂ ರೈತರ ಸಮಸ್ಯೆ ಪರಿಹಾರಕ್ಕೆ ಯತ್ನಿಸಲಾಗುವುದು ಎಂದು ಶಾಸಕರಿಗೆ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಭರವಸೆ ನೀಡಿದರು.

ರೈತರು ಮತ್ತು ಗ್ರಾಮಸ್ಥರು ಜಿಲ್ಲಾಡಳಿತ, ಅರಣ್ಯ ಇಲಾಖೆ, ಅರಣ್ಯ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದರು.

Related