ಯೋಗದಿಂದ ಜಗತ್ತನ್ನು ಒಂದು  ಮಾಡಬಹುದು: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

ಯೋಗದಿಂದ ಜಗತ್ತನ್ನು ಒಂದು  ಮಾಡಬಹುದು: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಜೂನ್ 21: ಯೋಗದಿಂದ ಜಗತ್ತನ್ನು ಒಂದು  ಮಾಡಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.  ಅವರು ಇಂದು   ಮೈಸೂರು ಅರಮನೆ ಮೈದಾನದಲ್ಲಿ ಆಯೋಜಿಸಿದ್ದ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಪಾಲ್ಗೊಂಡು  ಮಾತನಾಡಿದರು.

ಯೋಗ ಅಂತರರಾಷ್ಟ್ರೀಯ ದಿನಾಚರಣೆಯಾಗಲು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪಾತ್ರ ಬಹಳ ದೊಡ್ಡದಿದೆ. ಈ ಬಾರಿ ಮೈಸೂರಿಗೆ ಬಂದು ಅಂತರರಾಷ್ಟ್ರೀಯ ನಕ್ಷೆಯಲ್ಲಿ ಮೈಸೂರನ್ನು ತಂದಿರುವುದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿ ಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಯೋಗ ಮನಸ್ಸು ಮತ್ತು ದೇಹವನ್ನು ಒಂದು ಮಾಡುವ ಸಾಧನ.   ಯೋಗದಿಂದ ಆರೋಗ್ಯ ಮತ್ತು ಚರಿತ್ರೆ  ಉಂಟಾಗುತ್ತದೆ.  ಈ ದೇಶಕ್ಕೆ ದೊಡ್ಡ ಚರಿತ್ರೆ ಇದೆ. ಚಾರಿತ್ಯ ಅಗತ್ಯವಿದೆ. ಚಾರಿತ್ಯ ನೀಡುವ ಕೆಲಸವನ್ನು ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ.  ‘ಮಾನವೀಯತೆಗಾಗಿ ಯೋಗ’ ಯಶಸ್ವಿಯಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Related