ಚಿಕ್ಕಬಳ್ಳಾಪುರ: ತಾಲ್ಲೂಕಿನ ಆಕಲತಿಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಅಪರಾಧ ಪ್ರಕರಣದಲ್ಲಿ ಅಂತರ್ ರಾಜ್ಯ ಸುಲಿಗೆಕೋರರನ್ನು ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ 21/08/2024 ರಂದು ಸಂಜೆ 6:15 ಗಂಟೆಯಲ್ಲಿ ಶ್ರೀ ಮಂಜುನಾಥ ಪೈನಾನ್ಸ್ ವತಿಯಿಂದ ಹಣವನ್ನು ಕಲೆಕ್ಷನ್ ಮಾಡಲು ಪಳನಿ ಹಾಗೂ ಮಲ್ಲೇಶ್ ಎಂಬುವರು ತಮ್ಮ ದ್ವಿಚಕ್ರವಾಹನದಲ್ಲಿ ಬಾಗೇಪಲ್ಲಿ ಕಡೆಗೆ ತೆರಳಿ, ಕ್ಯಾಶ್ ಕಲೆಕ್ಷನ್ ಮಾಡಿಕೊಂಡು ಆಕಲತಿಮ್ಮನಹಳ್ಳಿ ಗ್ರಾಮದಲ್ಲಿ ಹಣ ಸಂಗ್ರಹಿಸಿ ತಮ್ಮ ದ್ವಿ-ಚಕ್ರವಾಹನದಲ್ಲಿ ಗುಂಡ್ಲಗುರ್ಕಿ ಗ್ರಾಮದ ಕಡೆಗೆ ಹೋಗುತ್ತಿದ್ದ ವೇಳೆ ಮೂವರು ದುಷ್ಕರ್ಮಿಗಳು ಪಲ್ಸರ್ ಬೈಕ್ ನಲ್ಲಿ ಬಂದು ಪಳನಿ ಮತ್ತು ಮಲ್ಲೇಶರ ದ್ವಿಚಕ್ರವಾಹನವನ್ನು ಅಡ್ಡಗಟ್ಟಿ, ಚಾಕು ತೋರಿಸಿ ಬೆದರಿಸಿ, 19000 ರೂ ಕಿತ್ತುಕೊಂಡು ಪರಾರಿಯಾಗಿದ್ದರು. ಇದನ್ನೂ ಓದಿ: ಶಾಸಕರ ವಿರುದ್ದ ಪ್ರತಿಭಟನೆ
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ದೂರುದಾರ ಪಳನಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಅದರಂತೆ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.