ಬಡ್ಡಿ ಸಬ್ಸಿಡಿ ಯೋಜನೆಗೆ ಕೇಂದ್ರ ಅಸ್ತು

ಬಡ್ಡಿ ಸಬ್ಸಿಡಿ ಯೋಜನೆಗೆ ಕೇಂದ್ರ ಅಸ್ತು

ದೆಹಲಿ: ಕೇಂದ್ರ ಬಜೆಟ್ 2024-25 ನೇ ಸಾಲಿನಲ್ಲಿ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಾಲ ಸೀತಾರಾಮನ್ ಅವರು ನಗರ ವಸತಿ ಯೋಜನೆ ಸಾಲ ಸೌಲಭ್ಯವನ್ನು ಬಡ್ಡಿ ಸಬ್ಸಿಡಿ ಯೋಜನೆಗೆ ಕೇಂದ್ರ ಬಜೆಅಟ್ ನಲ್ಲಿ ಇಂದು ನಿರ್ಮಲಾ ಸೀತಾರಾಮ ಅವರು ಘೋಷಿಸಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ನಗರ ವಸತಿಗೆ 2.2 ಲಕ್ಷ ಕೋಟಿ ರೂಪಾಯಿಗಳ ಕೇಂದ್ರ ನೆರವು ಮತ್ತು ನಗರ ವಸತಿ ಕಾಮಗಾರಿಗಳಿಗೆ ಕೈಗೆಟುಕುವ ದರದಲ್ಲಿ ಸಾಲವನ್ನು ನೀಡಲು ಬಡ್ಡಿ ಸಬ್ಸಿಡಿ ಯೋಜನೆಯನ್ನು ಸರ್ಕಾರ ಮಂಗಳವಾರ ಪ್ರಕಟಿಸಿದೆ. ಇದನ್ನೂ ಓದಿ: ಬಜೆಟ್ ಮಂಡನೆ 2024; ಯಾವುದು ಅಗ್ಗ, ಯಾವುದು ದುಬಾರಿ?

ವರ್ಧಿತ ಲಭ್ಯತೆಯೊಂದಿಗೆ ದಕ್ಷ ಮತ್ತು ಪಾರದರ್ಶಕ ಬಾಡಿಗೆ ವಸತಿ ಮಾರುಕಟ್ಟೆಗಾಗಿ ಸರ್ಕಾರವು ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದರು. 30 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೊಡ್ಡ ನಗರಗಳಿಗೆ ಸಾರಿಗೆ ಆಧಾರಿತ ಅಭಿವೃದ್ಧಿ ಯೋಜನೆಗಳನ್ನು ಮತ್ತು ಐದು ವರ್ಷಗಳಲ್ಲಿ 100 ಸಾಪ್ತಾಹಿಕ ಹಟ್ ಗಳ ಅಭಿವೃದ್ಧಿಯನ್ನು ಬೆಂಬಲಿಸುವ ಯೋಜನೆಯಿದೆ ಎಂದರು.

 

Related