ಭಾರತ ಸರ್ವ ಧರ್ಮಗಳ ನೆಲೆಬೀಡು: ಶಾಸಕ ಎಂ. ಸತೀಶ್ ರೆಡ್ಡಿ

ಭಾರತ ಸರ್ವ ಧರ್ಮಗಳ ನೆಲೆಬೀಡು: ಶಾಸಕ ಎಂ. ಸತೀಶ್ ರೆಡ್ಡಿ

ಬೊಮ್ಮನಹಳ್ಳಿ: ಸರ್ವಧರ್ವವನ್ನು ಪ್ರೀತಿಸುವ, ಗೌರವಿಸುವ ಸ್ವಾಮಿ ವಿವೇಕಾನಂದರ ಗುಣಗಳನ್ನು ಅಳವಡಿಸಿಕೊಳ್ಳುವಂತೆ ಜನತೆಗೆ ಶಾಸಕ ಎಂ. ಸತೀಶ್ ರೆಡ್ಡಿ ಕರೆ ನೀಡಿದರು.

ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಇಂದು ಬೊಮ್ಮನಹಳ್ಳಿ ಹೆಬ್ಬಾಗಿಲಿನ ಬಳಿ ಇರುವ ಸ್ವಾಮಿ ವಿವೇಕಾನಂದರ ಮೂರ್ತಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಶಾಸಕರು, ಭಾರತ ಸರ್ವ ಧರ್ಮಗಳ ನೆಲೆಬೀಡು. ಅನೇಕತೆಯಲ್ಲಿ ಏಕತೆಯನ್ನು ಕಾಣುವ ನಾಡಿನಲ್ಲಿ ಯಾರೂ ಯಾರ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡದೇ ಎಲ್ಲರನ್ನು ಗೌರವಿಸಬೇಕು. ಸ್ವಾಮಿ ವಿವೇಕಾನಂದರ ಆದರ್ಶಗಳನ್ನ ಪಾಲಿಸುತ್ತಾ ಹಿಂಧುತ್ವವನ್ನು ಪ್ರತಿಪಾದಿಸೋಣ. ಪ್ರಧಾನಿ ನರೇಂದ್ರ ಮೋದಿಯವರಿಗೂ ಪ್ರೇರಣೆ ಸ್ಪೂರ್ತಿ ವಿವೇಕಾನಂದರೇ ಎಂದು ಸ್ಮರಿಸಿದರು.

ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮದ ಸಿದ್ಧಾಂತಗಳು ಮಿಂಚಿನಲ್ಲಿ ಅಲ್ಲಿನ ಜನರನ್ನು ಆಕರ್ಷಿಸಿದವು. ಹಿಂದೂ ಧರ್ಮದ ಬಗೆಗೆ ಆಸಕ್ತಿಯನ್ನು ಕೆರಳಿಸಿದರು. ಇಂದು ಪ್ರಪಂಚದಾದ್ಯಂತ ಭಾರತ ದೇಶದೆಡೆಗೆ ಎಲ್ಲರೂ ತಿರುಗು ನೋಡುವಂತೆ ಮಾಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ.

ಕೇಂದ್ರ ಹಾಗೂ ರಾಜ್ಯಗಳೆರಡರಲ್ಲೂ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದು, ಮುಂದಿನ ಭಾರಿಯೂ ಬಿಜೆಪಿಯೇ ಅಧಿಕಾರದ ಗದ್ದುಗೆಯೇರಲಿದೆ ಎಂಬ ವಿಶ್ವಾಶವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಮಂಜುನಾಥರೆಡ್ಡಿ, ಮಾಜಿ ಕೌನ್ಸಿಲರ್ ಚಂದ್ರಶೇಖರ್ ರೆಡ್ಡಿ, ಬಿಜೆಪಿ ಮುಖಂಡ ಅನಿಲ್ ಕುಮಾರ್, ಚೆಲ್ಲಾರಾಂ, ಬಿಜೆಪಿ ಮುಖಂಡರುಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Related